ಶಿಕ್ಷಣ ವ್ಯಕ್ತಿತ್ವ ರೂಪಿಸುವ ಸಾಧನವಾಗಬೇಕು: ಡಾ. ಭೋಜರಾಜ ಈ ಬೆಳಕೂಡ

ಶಿಕ್ಷಣ ವ್ಯಕ್ತಿತ್ವ ರೂಪಿಸುವ ಸಾಧನವಾಗಬೇಕು: ಡಾ. ಭೋಜರಾಜ ಈ ಬೆಳಕೂಡ Education should be a tool for shaping personality: Dr. Bhojaraja E Belakuda

ಲೋಕದರ್ಶನ ವರದಿ 

ಗೋಕಾಕ 11: ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್‌. ಎಸ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಕ್ರೀಡಾ ಹಾಗೂ ವಿವಿಧ ಸಂಘ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಕಲ್ಲೋಳ್ಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು  ಹಾಗೂ ಕೃಷಿ ತಜ್ಞರಾದ ಡಾ. ಭೋಜರಾಜ ಈ ಬೆಳಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶಿಕ್ಷಣ ಮತ್ತು ವ್ಯಕ್ತಿತ್ವ ನಿರ್ಮಾಣ ಅವಿನಾಭಾವ ಸಂಭಂಧವನ್ನು ಹೊಂದಿವೆ. ನಿಜವಾದ ಶಿಕ್ಷಣ ಕೇವಲ ಅಂಕಗಳಿಕೆಯಲ್ಲ: ಬದಲಾಗಿ ಒಬ್ಬ ವ್ಯಕ್ತಿಯ ಸರ್ವತೋಮುಖ ಮತ್ತು ಸಂಸ್ಕಾರಯುತ ಜೀವನ ರೂಪಿಸುವ ಸಾಧನವಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಡಾ. ಬಿ. ಎಮ್‌. ತುರಡಗಿರವರು ಮಹಾವಿದ್ಯಾಲಯದ ಎಲ್ಲ ಚಟುವಟಿಕೆಗಳ ಸಮಗ್ರ ಮಾಹಿತಿ ಕುರಿತಾದ ವಾರ್ಷಿಕ ವರದಿಯನ್ನು ಮಂಡಿಸಿದರು.

ಮುಖ್ಯ ಅತಿಥಿಗಳ ಪರಿಚಯವನ್ನು ಋಂಅ ಸಂಯೋಜಕರಾದ ಡಾ. ಎನ್‌. ಎಲ್‌. ತೇರದಾಳ ಮಾಡಿದರು. ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವಿವರಣೆಯನ್ನು ಡಾ. ರಾಜೇಶ್ವರಿ. ಎಚ್‌. ವ್ಹಿ. ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ  ವ್ಹಿ.ಎ ಕಡಕೋಳರವರು ವಹಿಸಿದ್ದರು. ಕಾರ್ಯದರ್ಶಿಗಳಾದ ಆರ್‌. ಎಮ್‌. ವಾಲಿ, ಉಪಪ್ರಾಚಾರ್ಯರಾದ ಡಾ. ಆರ್‌. ಎಸ್‌. ಬಳಿಗಾರ, ಕ್ರೀಡಾ ವಿಭಾಗ ಉಪಾಧ್ಯಕ್ಷರಾದ ಡಾ. ಯು. ಎಮ್‌. ಶಾಗೋಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ  ಎ. ಎಲ್‌. ದರಗದ, ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ಕು. ಬಿ.ಎಮ್‌. ಮಾಲದಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ನುಡಿ, ನಿರೂಪಣೆಯನ್ನು ಡಾ. ಕೃಷ್ಣಮೂರ್ತಿ ಎಂ. ಎಸ್ ಮಾಡಿದರು. ಹಾಗೂ ಡಾ. ಯು. ಎಮ್‌. ಶಾಗೋಟಿ ವಂದನಾರೆ​‍್ಣ ಮಾಡಿದರು.