ರಷ್ಯಾದ ಕಮ್ಚಟ್ಕಾ ದ್ವೀಪದ ಬಳಿ ಭೂಕಂಪನ
ಕಮ್ಚಾಟ್ಸ್ಕಿ, ಮಾರ್ಚ್ 30 (ಸ್ಪುಟ್ನಿಕ್) ರಷ್ಯಾದ ಪೂರ್ವದ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.0 ಎಂದು ದಾಖಲಾಗಿದೆ.
ಉಸ್ತ್-ಕಾಮ್ಚಾಟ್ಸ್ಕ್ನ ವಸಾಹತುವಿನಿಂದ 175 ಕಿಲೋಮೀಟರ್ ನಲ್ಲಿ (108 ಮೈಲಿ) ಕಂಪನ ದಾಖಲಾಗಿದೆ ಎಂದು ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್‌ನ ಭೂ ಭೌತಶಾಸ್ತ್ರ ಸಮೀಕ್ಷೆಯ ಪ್ರಾದೇಶಿಕ ಶಾಖೆ ಸೋಮವಾರ ತಿಳಿಸಿದೆ .
ಕಮ್ಚಟ್ಕಾವು ಭೂಕಂಪನದಿಂದ ಸಕ್ರಿಯವಾಗಿರುವ ವಲಯದಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುತ್ತದೆ ಮತ್ತು ನಿಯಮಿತವಾಗಿ ಭೂಕಂಪಗಳಿಗೆ ಪದೆ, ಪದೇ ತುತ್ತಾಗುತ್ತಿದೆಎಂದು ಹೇಳಲಾಗಿದೆ.