ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಭೂಕಂಪ
ಕಠ್ಮಂಡು: ಆಗಸ್ಟ್ 06: ಕಠ್ಮಂಡು ಕಣಿವೆ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ದಾಖಲಾಗಿದೆ.
ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, 5:26 ಕ್ಕೆ 5.3 ತೀವ್ರತೆಯ ಭೂಕಂಪವು ನುವಾಕೋಟ್ ಜಿಲ್ಲೆಯ ಬೆಲ್ಕೋಟ್ ಗಧಿಯಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 2015ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ವಿನಾಶಕಾರಿ ಭೂಕಂಪವು ಸುಮಾರು 9,000 ಜನರನ್ನು ಬಲಿತೆಗೆದುಕೊಂಡಿತು ಮತ್ತು ಸುಮಾರು 22,000 ಜನರು ಗಾಯಗೊಂಡರು. ಇದು 8,00,000 ಮನೆಗಳು ಮತ್ತು ಶಾಲಾ ಕಟ್ಟಡಗಳನ್ನು ಹಾನಿಗೊಳಗಾಗಿದ್ದವು.