ಅಂತರರಾಷ್ಟ್ರೀಯ

ಆಫ್ಪನಿಸ್ತಾನದಲ್ಲಿ ಭೂಕಂಪನ

ಆಫ್ಪನಿಸ್ತಾನದಲ್ಲಿ ಭೂಕಂಪನ

ಕಾಬೂಲ್ ಆಗಸ್ಟ್ 19:  ತೀವ್ರ ರಾಜಕೀಯ ಸಂಕಷ್ಟಕ್ಕೆ  ಒಳಗಾಗಿರುವ ಆಫ್ಪನಿಸ್ತಾನದಲ್ಲಿ  ಇಂದು ಭೂಕಂಪನ  ಸಂಭವಿಸಿದೆ.

ಭೂಕಂಪನದ ತೀವ್ರತೆ  ರಿಕ್ಟರ್ ಮಾಪನದಲ್ಲಿ 4.5 ಎಂದು ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. 

ರಾಜಧಾನಿ ಕಾಬುಲ್ ನಿಂದ 200  ಕಿಲೋಮೀಟರ್ ದೂರದಲ್ಲಿ ಭೂಕಂಪನ ಸಂಭವಿಸಿರುವುದಾಗಿ ವರದಿಯಾಗಿದೆ. ಸ್ಥಳೀಯ ಕಾಲಮಾನ 11.20 ಕ್ಕೆ ಭೂಕಂಪ ಸಂಭವಿಸಿದ ವರದಿಯಾಗಿದ್ದು ಸದ್ಯಕ್ಕೆ  ಯಾವುದೇ  ಹಾನಿಯ ಬಗ್ಗೆ ವರದಿಯಾಗಿಲ್ಲ ಮತ್ತು ಹೆಚ್ಚಿನ ವಿವರ ಕಾಯಲಾಗುತ್ತಿದೆ ಎಂದೂ   ಹೇಳಲಾಗಿದೆ. 

ಸುದ್ದಿ ಓದಿ