ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ ಕೃತ್ಯ; ತೀವ್ರ ಪ್ರತಿಭಟನೆ ದಾಖಲಿಸಿದ ಭಾರತ

ಪಾಕಿಸ್ತಾನದಲ್ಲಿ ಹಿಂದೂ ದೇಗುಲ  ಧ್ವಂಸ ಕೃತ್ಯ;  ತೀವ್ರ  ಪ್ರತಿಭಟನೆ ದಾಖಲಿಸಿದ ಭಾರತ

ಇಸ್ಲಾಮಾಬಾದ್, ಜ 1 : ಪಾಕಿಸ್ತಾನದ  ಖೈಬರ್  ಪಖ್ತುಂಖ್ವಾ ಪ್ರಾಂತ್ಯದ  ಕರಾಕ್ ಜಿಲ್ಲೆಯ  ತೇರಿ ಗ್ರಾಮದಲ್ಲಿ  ಹಿಂದೂ ದೇಗಲವನ್ನ  ದ್ವಂಸಗೊಳಿಸಿದ  ಘಟನೆಗೆ ಸಂಬಂಧಿಸಿದಂತೆ  ಭಾರತ  ಔಪಚಾರಿಕವಾಗಿ ತನ್ನ ಪ್ರತಿಭಟನೆಯನ್ನು ಪಾಕಿಸ್ತಾನಕ್ಕೆ  ದಾಖಲಿಸಿದೆ  ಎಂದು ಬೆಳವಣಿಗಳ ಬಗ್ಗೆ  ಮಾಹಿತಿ ಹೊಂದಿರುವ  ಮೂಲಗಳು   ಶುಕ್ರವಾರ  ತಿಳಿಸಿವೆ.ಪಾಕಿಸ್ತಾನದೊಂದಿಗೆ ಈ ವಿಷಯವನ್ನು  ಅಧಿಕೃತವಾಗಿ  ಪ್ರಸ್ತಾಪಿಸಿದ್ದು,  ಕೃತ್ಯ ಸಂಬಂಧ  ಭಾರತ  ತನ್ನ  ತೀವ್ರ  ಪ್ರತಿಭಟನೆಯನ್ನು  ದಾಖಲಿಸಲಾಗಿದೆ   ಮೂಲಗಳು  ಹೇಳಿವೆ.

" ವಾಯುವ್ಯ  ಪಾಕಿಸ್ತಾನದ  ಪಟ್ಟಣವಾದ ಕರಾಕ್‌  ಜಿಲ್ಲೆಯ  ತೇರಿ ಗ್ರಾಮದಲ್ಲಿರುವ ಕೃಷ್ಣ ದ್ವಾರ ಮಂದಿರದ  ಜೊತೆಗೆ  ಶ್ರೀ ಪರಮಹಂಸಜೀ  ಜಿ ಮಹಾರಾಜರ ಸಮಾಧಿಯನ್ನು  ಬುಧವಾರ  ಗುಂಪೊಂದು ಧ್ವಂಸಗೊಳಿಸಿತ್ತು.  ದೇವಾಲಯ ಹೆಚ್ಚುವರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ದೇಗುಲ ನಿರ್ಮಿಸಿಕೊಂಡಿದೆ ಎಂದು  ಹೇಳಿದ  ಗುಂಪು     ಕಟ್ಟಡವನ್ನು  ದ್ವಂಸಗೊಳಿಸಿದೆ.  ದಾಳಿಯಲ್ಲಿ  1500ಕ್ಕೂ ಹೆಚ್ಚುಮಂದಿ  ಪಾಲ್ಗೊಂಡಿದ್ದರು  ವರದಿಗಳು ತಿಳಿಸಿವೆ.ಈ  ನಡುವೆ ಹಿಂದೂ ದೇವಾಲಯ ದ್ವಂಸಗೊಳಿಸಿದ ಆರೋಪದಡಿ ಜಮಿಯತ್ ಉಲೇಮಾ -ಇ- ಇಸ್ಲಾಂ ಪಕ್ಷದ ನಾಯಕ ರೆಹಮತ್ ಸಲಾಂ ಖಟ್ಟಕ್ ಸೇರಿ 26 ಮಂದಿಯನ್ನು ಬಂಧಿಸಲಾಗಿದೆ.


ಸುದ್ದಿ ಓದಿ