ಅಂತರರಾಷ್ಟ್ರೀಯ

ಕಜಕಿಸ್ತಾನದಲ್ಲಿ ಸಾರ್ವತ್ರಿಕ ಮತದಾನ ಪ್ರಾರಂಭ

ಕಜಕಿಸ್ತಾನದಲ್ಲಿ  ಸಾರ್ವತ್ರಿಕ ಮತದಾನ  ಪ್ರಾರಂಭ

ಅಲ್ಮಾಟಿ, ಕಜಕಿಸ್ತಾನ್, ಜ 10: ಸಂಸತ್ತಿನ ಕೆಳ ಮನೆ ಮತ್ತು ಸ್ಥಳೀಯ ಪ್ರತಿನಿಧಿ ಗಳ ಆಯ್ಕೆಗಾಗಿ ಕಜಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಆರಂಭವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನಕ್ಕಾಗಿ ಮತದಾನ ಕೇಂದ್ರಗಳನ್ನು ಭಾನುವಾರ ತೆರೆಯಲಾಗಿದ್ದು,   ದೇಶವು ತನ್ನ ಹೊಸ ಕೆಳಮನೆ ಮತ್ತು ಸ್ಥಳೀಯ ಪ್ರತಿನಿಧಿಗಳು ಆಯ್ಕೆ ಮಾಡಲಿದೆ.ಮತದಾನ  ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮಜಲಿಸ್  ಎಂದು ಕರೆಯಲ್ಪಡುವ ಕೆಳಮನೆ  107 ಚುನಾಯಿತ ಪ್ರತಿನಿಧಿಗಳನ್ನು ನ್ನು ಒಳಗೊಂಡಿದೆ, ಅವರಲ್ಲಿ 98 ಮಂದಿ ಚುನಾವಣೆಯ ಸಮಯದಲ್ಲಿ  ಪಕ್ಷದಿಂದಲೇ  ಚುನಾಯಿತರಾಗುತ್ತಾರೆ, ಮತ್ತು ಉಳಿದ 9 ಸದಸ್ಯರನ್ನು  ದೇಶದ ಜನಾಂಗೀಯ ಗುಂಪುಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ರಾಜಕೀಯ ಸಂಸ್ಥೆಯಾದ ಕಜಕಿಸ್ತಾನದ ಅಸೆಂಬ್ಲಿಯಿಂದ ಚುನಾಯಿತರಾಗಲಿದ್ದಾರೆ. 



ಸುದ್ದಿ ಓದಿ