ಆರ್ಥಿಕ ಬಿಕ್ಕಟ್ಟು ಜಠಿಲ, ನೂತನ ಅಧ್ಯಕ್ಷ ಬೈಡನ್ ತೀವ್ರ ಕಳವಳ
ವಾಷಿಂಗ್ಟನ್, ಜನವರಿ 24: ಕರೋನ ಹಾವಳಿಯ ನಂತರ ದೇಶದಲ್ಲಿ ವರು ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ ಎಂದು ನೂತನ ಅಧ್ಯಕ್ಷ ಜೋ ಬೈಡೆನ್ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ಶತಮಾನದಲ್ಲಿ ಒಮ್ಮೆ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಉಳಿದಿದ್ದೇವೆ, ಅದು ಆಧುನಿಕ ಇತಿಹಾಸದಲ್ಲಿ ಅತ್ಯಂತ ಅಸಮಾನತೆ, ಉದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮತ್ತು ಬಿಕ್ಕಟ್ಟು ದಿನ ದಿನೇ ಬಹಳ ಗಾಡವಾಗುತ್ತಿದೆ. ಬೈಡೆನ್ ಆರ್ಥಿಕ ಸಲಹೆಗಾರರೊಂದಿಗಿನ ಸಭೆಯ ನಂತರ ಹೇಳಿಕೆಗಳಲ್ಲಿ ತಿಳಿಸಿದ್ದಾರೆ . ಇದುವರೆಗೆ ಸೋಂಕಿಗೆ ನಾಲ್ಕು ಲಕ್ಷ ಜನ ಮೃಪಟ್ಟಿದ್ದು ಹತೋಟಿಗೆ ಬರುವವರಗೂ ಕನಿಷ್ಠ ಇನ್ನೂ ಎರಡು ಲಕ್ಷ ಜನ ಸಾಯಬಹುದು ಎಂಬ ಆತಂಕವನ್ನು ನೂತನ ಅಧ್ಯಕ್ಷರು ತೋಡಿಕೊಂಡಿದ್ದಾರೆ.