ವಿಶ್ವ ಎಡ್ಸ್ ದಿನಾಚರಣೆಗೆ ಚಾಲನೆ
ಲೋಕದರ್ಶನ ವರದಿ
ಹುಕ್ಕೇರಿ 08: ಎಚ್ಆಯ್ವ್ಹಿ/ಎಡ್ಸ್ ರೋಗವಲ್ಲ. ವೈರಸ್ ಸೊಂಕಿನಿಂದ ಬರುವ ಇದು ಮಾರಕ ರೋಗವೂ ಕೂಡ ಅಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇವನ್ನು ಸಂಪೂರ್ಣವಾಗಿ ಗುಣ ಮಾಡಲು ಸಾಧ್ಯವಾಗದಿದ್ದರೂ ತಡೆಗಟ್ಟುವ ಸಾಮಧ್ಯವಿದೆ. ಸಮಾಜ ಇವರನ್ನು ದೂರಿಡದೆ ಮನೋಸ್ಥೆರ್ಯ ನೀಡಬೇಕೆಂದು ಸಿವ್ಹಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನ ಸೇವಾ ಸಮಿತಿಯ ಕಾರ್ಯದಶರ್ಿ ಭಾಗ್ಯಮ್ಮ ತಿಳಿಸಿದರು.
ಅವರು ತಾಲೂಕ ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ ಇಲಾಖೆ ಹಾಗೂ ಇನ್ನಿತರ ವಿವಿಧ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರದಂದು ರಾಷ್ಟ್ರೀಯ ಎಚ್ಆಯ್ವ್ಹಿ/ಎಡ್ಸ್ ಮತ್ತು ವಿಶೇಷ ವಿಕಲಚೇತನ ದಿನಾಚಾರಣೆ ಕಾರ್ಯಕ್ರವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಂದಿನ ಈ ಕಾರ್ಯಕ್ರಮ ಕಾಟಾಚಾರದ್ದಾಗಿತ್ತು. ಜನ ಪ್ರತಿನಿಧಿಗಳಿಗೆ, ಮಾಧ್ಯಮಗಳಿಗೆ, ಸ್ವ ಸಹಾಯ ಸಂಘಗಳಿಗೆ ಆಹ್ವಾನ ನೀಡದೆ ಪ್ರೌಢ ಶಾಲಾ ಮಕ್ಕಳ ಉಪಸ್ಥಿತಿಯಲ್ಲಿ ಆಯೋಜಿಸಿದ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆಂಬುದನ್ನು ಆಯೋಜಕರೇ ತಿಳಿಸಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಥಾ ಆಯೊಜಿಸಲಾಗಿತ್ತು. ಸಿವ್ಹಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನ ಸೇವಾ ಸಮಿತಿಯ ಕಾರ್ಯದಶರ್ಿ ಭಾಗ್ಯಮ್ಮ ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಶಾಲಾ ಕುವರಿಯರು ಮುಂಜಾನೆ 9 ಗಂಟಯಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಸಿಲಿನಲ್ಲಿ ನಿಂತು ಕೊಂಡಿದ್ದರು. 10 ಗಂಟೆಗೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ 11.30 ಕ್ಕೆ ಪ್ರಾರಂಭಗೊಂಡಿತು.
ಸರಕಾರಿ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೆಲ ಮಹತ್ವದ ಸರಕಾರಿ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಸರಕಾರದ ಆದೇಶಕ್ಕೆ ಮಾನ್ಯತೆ ನೀಡಲು ಮಾತ್ರ ಯಾರನ್ನೂ ಆಹ್ವಾನಿಸದೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ದುರದೃಷ್ಠಕರವೆಂದರೆ ತಪ್ಪಾಗಲಾರದು.
ಅಂಗನವಾಡಿ ಕಾರ್ಯಕತರ್ೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್.ಖೆಮಾಳೆ ನಿರೂಪಿಸಿದರು. ಶ್ರಿದೇವಿ ಸ್ವಾಗತಿಸಿದರೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಾದೇವಿ ಚಕಮರಿ ಪ್ರಾಸ್ತಾವಿಕ ಹಾಗೂ ಅಂಗವೈಕಲ್ಯ ಕುರಿತು ಮಾತನಾಡಿ ಕೊನೆಗೆ ವಂದಿಸಿದರು. ಮುಖ್ಯ ಅತಿಥಿಗಾಗಿ ಆಗಮಿಸಿದ ತಹಶೀಲದಾರ, ನಾಗನಗೌಡ ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕಾ ವೈದ್ಯಾಧಿಕಾರಿ ಡಾ. ಉದಯ ಕುಡಚಿ ಹಾಗೂ ಆಪ್ತ ಸಮಾಲೋಚಕ ದುಂಡಪ್ಪ ಬಿರಗೌಡರ ಎಚ್ ಆಯ್ ವ್ಹಿ/ಎಡ್ಸ್ ವಿಷಯ ಕುರಿತು ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗೃತೆ ಕ್ರಮದ ವಿಷಯ ಕುರಿತು ಮಾತನಾಡಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ, ಉಪಾಧ್ಯಕ್ಷ ಆಯ್.ಕೆ.ಹೂಲಿಕಟ್ಟಿ, ಕಾರ್ಯದಶರ್ಿ ಎಚ್.ಎಲ್.ಪಾಟೀಲ, ನ್ಯಾಯವಾದಿ ಭೀಮಸೇನ ಬಾಗಿ, ಗಾವಡೆ, ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.