ಬೆಳಗಾವಿ

ಚರಂಡಿ ಕಾಮಗಾರಿಗೆ ಗಂಗವ್ವ ಮುಗಳಖೋಡ ಚಾಲನೆ

ಚರಂಡಿ ಕಾಮಗಾರಿಗೆ ಗಂಗವ್ವ ಮುಗಳಖೋಡ ಚಾಲನೆ

ಗುರ್ಲಾಪೂರ 09: ಮೂಡಲಗಿ ಪುರಸಭೆಯ ಗುರ್ಲಾಪೂರ ಗ್ರಾಮದ 21ನೇ ವಾರ್ಡಿನಲ್ಲಿ ಪುರಸಭೆ ಸದಸ್ಯರಾದ ಗಂಗವ್ವ ಮುಗಳಖೋಡ ಇವರು ಡುಮ್ಮಾಳಿ ಪ್ಲಾಟ್‍ದಲ್ಲಿ ಕಂಬಾರ ಮನೆಯಿಂದ ಚಿಕ್ಕೋಡಿ ಮುಖ್ಯ ರಸ್ತೆಯವರಿಗೆ ಆರ.ಸಿ.ಸಿ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.

ಶಾಸಕರು ಹಾಗೂ ರಾಜ್ಯ ಕೆಎಮ್‍ಎಫ್ ಅಧ್ಯಕ್ಷ  ಬಾಲಚಂದ್ರ ಜಾರಕಿಹೂಳಿ ಅವರ ಆದೇಶದಂತೆ 2019-20ನೇ ಸಾಲಿನ ಎಸ್‍ಎಫ್‍ಸಿ ವಿಶೇಷ ಅನುದಾನದಲ್ಲಿ ಸುಮಾರು 4ಲಕ್ಷ ರೂಗಳಲ್ಲಿ ಮಂಜೂರ ಮಾಡಿ ಗ್ರಾಮದ ಜನರಿಗೆ ಅನುಕೂಲ ಮಾಡಿದ್ದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಯುವ ಧುರೀಣ ಪ್ರಕಾಶ ಮುಗಳಖೋಡ ರವರು ಗ್ರಾಮದಲ್ಲಿ ಇನ್ನೂ ಹಲವಾರು ಕಾಮಗಾರಿಗೆಳನ್ನು ನಮ್ಮ ಶಾಸಕರು ತಂದಿದ್ದಾರೆ ಅವುಗಳ ಉಪಯೋಗ ಎಲ್ಲರೂ ಪಡೆಯಬೇಕು ಎಂದರು

ಖಾನಟ್ಟಿ ಗ್ರಾಮ ಪಂಚಾಯಿತ ಸದಸ್ಯರಾದ ಈಶ್ವರ ಮುಗಳಖೋಡ, ನಾಗಪ್ಪ ಹಳ್ಳೂರ, ಮಲ್ಲೇಶ ಮುಗಳಖೋಡ, ಮಹಾಲಿಂಗ ಮುಗಳಖೋಡ, ರಾಮಪ್ಪ ಮುಗಳಖೋಡ, ಕಾಡಪ್ಪ ಮಗದುಮ್ಮ, ರವಿ ಶಾಬನ್ನವರ, ವಿಠ್ಠಲ ಮರಾಠೆ, ಬೀಮಪ್ಪ ದೇವರಮನಿ, ಮಹಾದೇವ ರಂಗಾಪೂರ, ಶಿವಬಸು ಮರಾಠೆ, ಸುಭಾಸ ಸುಳ್ಳನ್ನವರ, ದುಂಡಪ್ಪ ವಾಲಿಕಾರ, ಶಿವಬಸು ರಡರಟ್ಟಿ, ರವಿ ಶಿರಟ್ಟಿ, ಕಾಡಪ್ಪ ಕಂಬಾರ, ಬಸಪ್ಪ ಕದಮ, ಚಂದ್ರು ಕಂಬಾರ ಆಗಮಿಸಿದ್ದರು.

ಸುದ್ದಿ ಓದಿ