ವಿಜಯಪುರ

ಕೊರೊನಾ ಲಸಿಕಾಕರಣಕೆ ಚಾಲನೆ

ಕೊರೊನಾ ಲಸಿಕಾಕರಣಕೆ ಚಾಲನೆ

ವಿಜಯನಗರ 04: ಹೊಸಪೇಟೆ ಹಳೆ ಅಮರವತಿ ಗ್ರಾಮದ ಚಿತ್ತವಾಡ್ಗಿಯಲ್ಲಿ  ಆಕಾಶ್ ಪಿ.ಯು.ಕಾಲೇಜ್ ಮತ್ತು ಅಕಾಶ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ  ಕೊರೊನಾ ಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  

ಈ ಕಾರ್ಯಕ್ರಮಕ್ಕೆ ಚಿತ್ತವಾಡ್ಗಿಯ ಮುಖ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಬಸವರಾಜ ರವರನ್ನು ಸನ್ಮಾನ ಮಾಡಿ ಈ ಸಮಯದಲ್ಲಿ  ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ಕೋವಿಡ್ ಮುಕ್ತಮಾಡಬೇಕೆಂದು ತಿಳಿಸಿದರು.  

ಈ ಸಂದರ್ಭದಲ್ಲಿ ಆಕಾಶ್ ಪಿ.ಯು.ಕಾಲೇಜ್ ಮತ್ತು ಅಕಾಶ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಹೆಚ್‌.ಎನ್‌.ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು  ಕೊವೀಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗ  ಮಾಸ್ಕ್‌, ಸ್ಯಾನಿಟೆಜರ್ ಮತ್ತು ಸಾಮಜಿಕ ಅಂತರವನ್ನು ಕಾಪಡಿಕೊಂಡು ಕೊವೀಡ್‌ನಿಂದ ಪಾರಗಬೇಕೆಂದು  ಮನವಿ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಚಿತ್ತವಾಡ್ಗಿಯ ಭಾಗದ ನೂತನ ಹೊಸಪೇಟೆಯ ನಗರಸಭೆಯ ಸದಸ್ಯ ಡೊಮ್ಮಿ ಉಮಾ ಮಹೇಶ್ವರಿ , ಅಸ್ಲಂ ಮಳಿಗೆ ಮತ್ತು ಖಾಜ ಬನ್ನಿ ರಫಿಕ್ ಭಾಗವಹಿಸಿದರು ಹಾಗು ಕಾಲೇಜಿನ ಪ್ರಾಂಶುಪಾಲ ಮಹೇಶ್ ಚೌದ್ರಿ, ಹಾಗೂ ವೆಂಕಟೇಶ,ಅಯುಬ್ ಖಾನ್ ಉಪಸ್ಥಿತರಿದ್ದರು. 


ಸುದ್ದಿ ಓದಿ