ಲೇಖನಗಳು

ಡಾ. ರಾ. ಯ. ಧಾರವಾಡಕರ

ಡಾ. ರಾ. ಯ. ಧಾರವಾಡಕರ

ಹಿರಿಯ ಸಾಹಿತಿ ಡಾ. ರಾ. ಯ. ಧಾರವಾಡಕರ ಅವರು 15-7-1919 ರಂದು ಬಾಗಲಕೋಟಿಯಲ್ಲಿ ಜನಿಸಿದರು. ತಂದೆ ಯಲಗುರ್ದರಾವ, ತಾಯಿ ಗಂಗಾಬಾಯಿ. ಧಾರವಾಡಕರ ಅವರು 1944 ರಲ್ಲಿ ಧಾರವಾಡ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಆಗಿನ (ಕೆ.ಇ.ಬೋರ್ಡ ಕಾಲೇಜಿನಲ್ಲಿ) ತಮ್ಮ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ 1952 ರಿಂದ ಸುಮಾರು ಕಾಲುಶತಮಾನ ಕಾಲೇಜಿನ ಪ್ರಾಚಾರ್ಯರೆಂದು ಕಾರ್ಯನಿರ್ವಹಿಸಿ ಅದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು.  

ನಿವೃತ್ತಿಯ ನಂತರ  ಐದು ವರ್ಷ ರಾಜಭಾಷಾ ಆಯೋಗದ ಸದಸ್ಯರೆಂದು ಕಾರ್ಯನಿರ್ವಹಿಸಿದರು. ಪ್ರಬಂಧ, ಸಂಕೀರ್ಣ ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಹಿತ್ಯ ರಚಿಸಿದರು. ಕೆಲವು ಗ್ರಂಥಗಳಲ್ಲಿ ಕನ್ನಡ ಭಾಷಾಶಾಸ್ತ್ರ, ಹೊಸಗನ್ನಡ ಸಾಹಿತ್ಯದ ‘ಉದಯಕಾಲ’, ‘ಧೂಮ್ರವಲಯಗಳು’, ‘ನಾನು ಕಂಡ ಅಮೇರಿಕೆ  ‘ತೂರಿದ ಚಿಂತನಗಳು’, ‘ಪತ್ರಿಕಾ ವ್ಯವಸಾಯ’, ‘ಅಮೇರಿಕನ್ ನಿಗ್ರೊ ಕಥೆಗಳು’ ಹೀಗೆ ಸುಮಾರು 25 ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಗಾಂಧಿ ಸಾಹಿತ್ಯ ಕುರಿತು ಇವರ ಸಂಪಾದಕತ್ವದಲ್ಲಿ ಹಲವಾರು ಕೃತಿಗಳು ಹೊರಬಂದವು. 1964 ರಲ್ಲಿ ‘ಫುಲಬ್ರೈಟ ಫೆಲೋಶಿಫ್‌’ ಯೋಜನೆಯಲ್ಲಿ ಅಮೇರಿಕೆಯನ್ನು ಸಂದರ್ಶಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಇವರು ಉತ್ತಮ ಭಾಷಣಕಾರರು ಹಾಗೂ ವಾಗ್ಮಿಗಳು. ಕನ್ನಡ ನಾಡಿನ ಜನತೆ ಇವರ 70 ನೇ ವರ್ಷದ ಸಂದರ್ಭದಲ್ಲಿ ಸತ್ಕರಿಸಿ ‘ಪ್ರಬಂಧ ಪ್ರಪಂಚ’ ಎಂಬ ಬೃಹತ್ ಗ್ರಂಥವನ್ನು ಸಮರೆ​‍್ಣ ಮಾಡಿ, ತನ್ನ ಗೌರವವನ್ನು ಸಲ್ಲಿಸಿತು. ಇವರು 12-4-1991 ರಂದು ಧಾರವಾಡದಲ್ಲಿ ನಿಧನರಾದರು. ತಂದೆಯ ಸ್ಮರಣೆಗಾಗಿ ಮಗ ಡಾ. ಶ್ರೀರಾಮ ದತ್ತಿ ಇಟ್ಟು ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ, 


ಸುದ್ದಿ ಓದಿ