ಡಾ.ಬಾಬು ಹಸಿರು ಕ್ರಾಂತಿಯ ಹರಿಕಾರ: ಸಣ್ಣಕ್ಕಿ
ಮೂಡಲಗಿ 5: ದೇಶದ ಅಹಾರ ಕೊರತೆಯ ಸಂಕಷ್ಟದ ಸಮಯದಲ್ಲಿ ಡಾ.ಬಾಬು ಜಗಜೀವನರಾಮ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ ಮಾದರಿಯಾದ ಮಹಾನ ವ್ಯಕ್ತಿ ಡೊಡ್ಡ ಶಕ್ತಿಯಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ಹೇಳಿದರು.
ಸೋಮವಾರದಂದು ಅಂಬೇಡ್ಕರ ನಗರದ ಅಂಬೇಡ್ಕರ ಭವನದಲ್ಲಿ ಡಾ.ಬಾಬು ಜಗಜೀವನರಾಮ ಅವರ 114ನೇ ಜಯಂತಿ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ದಲಿತ ಮುಖಂಡರಾದ ಶಾಬೂ ಸಣ್ಣಕ್ಕಿ, ತಮ್ಮಣ್ಣಾ ಗಸ್ತಿ ಮತ್ತು ರಾಮು ಝಂಡೆಕುರಬರ, ಅನೀಲ ತಿಗಡಿ, ಸುಂದರ ಬಾಲಪ್ಪನವರ, ಶಿವಬಸು ಬಂಗೆನ್ನವರ ಮತ್ತಿತರರು ಇದ್ದರು.
ಪೋಟೋ ಕ್ಯಾಪ್ಸನ್ : ಮೂಡಲಗಿ: ಇಲ್ಲಿನ ಅಂಬೇಡ್ಕರ ನಗರದ ಅಂಬೇಡ್ಕರ ಭವನದಲ್ಲಿ ಡಾ. ಬಾಬು ಜಗಜೀವನ ರಾಮ ಅವರ ಭಾವ ಚಿತ್ರಕ್ಕೆ ಡಿಎಸ್ಎಸ್ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ಪೂಜೆ ಸಲ್ಲಿಸಿ ಮಾತನಾಡಿದರು.