ಮೂಡಲಗಿ

ಅದ್ದೂರಿಯಾಗಿ ಕಲ್ಲೋಳಿ ದುರ್ಗಾದೇವಿ ಮೂರ್ತಿಯ ಜಂಬೂ ಸವಾರಿ

ಅದ್ದೂರಿಯಾಗಿ ಕಲ್ಲೋಳಿ ದುರ್ಗಾದೇವಿ ಮೂರ್ತಿಯ ಜಂಬೂ ಸವಾರಿ

ಮೂಡಲಗಿ 16: ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ದುರ್ಗಾದೇವಿ ಮೂರ್ತಿ ಮೆರವಣಿಗೆಗೆ ರವಿವಾರದಂದು ಬಿಡಿಸಿಸಿ ಬ್ಯಾಂಕ ಹತ್ತಿರದಿಂದ ರಸ್ತೆ ಮಾರ್ಗವಾಗಿ ಅರಕೇರಿ ಅಮೋಘಸಿದ್ಧ ಪೀಠದ ಅವಧೂತ್ ಮಹಾರಾಜ, ಹುಬ್ಬಳ್ಳಿಯ ಜಡಿಸಿದ್ದಾಶ್ರಮದ ರಾಮನಂದ ಮಹಾಸ್ವಾಮೀಜಿ, ಮಲ್ಲಾಪುರ-ನೇಸರಗಿಯ ಚಿದಾನಂದ ಶ್ರೀಗಳು, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ನವರಾತ್ರಿ ಉತ್ಸವ ಸ್ವಾಗತ ಸಮೀತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ಹಾಗೂ ಮತ್ತಿತರರು ಸೇರಿದಂತೆ ಆನೆಯ ಅಂಬಾರಿ ಮೇಲೆಯ ಉತ್ಸವ ಮೂರ್ತಿಗೆ ಮತ್ತು ನವರಾತ್ರಿ ಪ್ರತಿಷ್ಠಾಪಣ ದುರ್ಗಾದೇವಿ ಮೂರ್ತಿಗೆ ಪುರ್ಷ್ಪಾಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.  

ನವರಾತ್ರಿಯ ದುರ್ಗಾದೇವಿ ಮೂರ್ತಿಯ ಜಂಬೂ ಸವಾರಿಯಲ್ಲಿ ಮಹಿಳೆಯ ಕುಂಭಮೇಳದೊಂದಿಗೆ ಡೊಳ್ಳು, ಸಂಬಾಳ, ಕರಡಿ ಮೇಳೆ ಸೇರಿದಂತೆ ಹಲವಾರು ಸಂಪ್ರದಾಯ ವಾದ್ಯಗಳಿಂದ ದುರ್ಗಾದೇವಿ ವೈಭವದ ಉತ್ಸವಕಕ್ಕೆ ಮೆರಗು ನೀಡಿದವು. ದುರ್ಗಾದೇವಿ ಮೂರ್ತಿಯ ಜೂಂಬೂ ಸವಾರಿ ವಿಕ್ಷಣೆಗೆ  ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿ ಜಂಬೂ ಸವಾರಿ ವೀಕ್ಷಿಸಿದರು. ಬೆಳಿಗ್ಗೆ ದೇವಸ್ಥಾನದ ಮೂಲ ಸನ್ನಿಧಿಗೆ ವೇದಮೂರ್ತಿ ಮೃತ್ಯುಂಜಯ ಹಿರೇಮಠ ಅವರು ಅಭಿಷೇಕ, ವಿಶೇಷ ಪೂಜೆ ಜರುಗಿತು. ಯಜ್ಞ, ಹೋಮ, ಹವನ, ಗಣಹೋಮ ಶಾಸ್ತ್ರಬದ್ಧವಾಗಿ ಜರುಗಿದವು. 

ಲಕ್ಷ್ಮೀದೇವಿ ದೇವಸ್ಥಾನದ ಜಿರ್ಣೋದ್ಧಾರ ಲೋಕಾರೆ​‍್ಣಯನ್ನು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ನೆರವೇರಿಸಿ ಮಾತನಾಡಿದ ಅವರು, ಕಲ್ಲೋಳಿಯಲ್ಲಿ ಕಳೆದ 40 ವರ್ಷಗಳಿಂದ ದಸರಾ ಉತ್ಸವ ಮತ್ತು ದೇವಿ ಪುರಾಣ ಏರಿ​‍್ಡಸಿಕೊಂಡು ಬಂದಿರುವುದು ಇಲ್ಲಿಯ ಜನರ ದೈವಭಕ್ತಿಯು ನಿಜಕ್ಕೂ ಶ್ಲಾಘನೀಯವಾಗಿದೆ. ಈ ಭಾಗದಲ್ಲಿ ಹಬ್ಬಗಳಿಂದ ಜನರಲ್ಲಿ ಸೌಹಾರ್ದತೆ, ಪ್ರೀತಿ, ವಿಶ್ವಾಸ ಬೆಳೆಯುತ್ತದೆ ಎಂದು ಉತ್ಸವಕ್ಕೆ ಶುಭಹಾರೈಸಿದರು. 

ನವರಾತ್ರಿ ಉತ್ಸವ ಕಮಿಟಿಯ ಸದಸ್ಯರಾದ ಭಗವಂತ ಪತ್ತಾರ, ನಾರಾಯಣ ಪತ್ತಾರ, ಉಮೇಶ ಪಾಟೀಲ, ಬಾಳಪ್ಪ ಮಟಗಾರ, ಈರಣ್ಣ ಮುನ್ನೋಳಿಮಠ, ಅಶೋಕ ಆಡೆನ್ನವರ, ಶೀತಲ ಅಥಣಿ, ರಾಮಪ್ಪ ಬೆಳಕೂಡ, ಅಜೀತ ಚಿಕ್ಕೋಡಿ, ಶಿವಾಂದ ಹೆಬ್ಬಾಳ, ಸಿದ್ದಪ್ಪ ಮುಗಳಿ, ರಮೇಶ ಹೆಬ್ಬಾಳ, ಲಕ್ಷ್ಮಣ ಹುಕ್ಕೇರಿ ಹಾಗೂ ಕಲ್ಲೋಳಿ ಪಟ್ಟಣದ ಸಾರ್ವಜನಿಕರು ಮೇರವಣಿಗೆಯಲ್ಲಿ ಭಾಗವಹಿಸಿದರು. 


ಸುದ್ದಿ ಓದಿ