ತಾವು ಕಲಿತ ಶಾಲೆಗೆ ಗ್ರೀನ್ ಬೋರ್ಡ್‌ಗಳ ಕೊಡುಗೆ
Donating green boards to the school they attended
ಹಾವೇರಿ 19: ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ತಾವು ಕಲಿತ ಶಾಲೆಗೆ 22 ಸಾವಿರರೂ ಮೌಲ್ಯದ ಮೂರು ಗ್ರೀನ್ ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಹಿರಿಯ ವಿದ್ಯಾರ್ಥಿಗಳು ಶಿಕ್ಷಣ ಪ್ರೇಮ ಹಾಗೂ ಗುರುಭಕ್ತಿಯನ್ನು ಮೆರೆದಿದ್ದಾರೆ.
ತಾಲೂಕಿನ ಅಗಡಿ ಗ್ರಾಮದ ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ 2003 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಭಾನುವಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಗ್ರೀನ್ ಬೋರ್ಡ್ ನೀಡಿದರು.
ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಗ್ರೀನ್ ಬೋರ್ಡ್ ಸ್ವೀಕರಿಸಿ ಮಾತನಾಡಿ ಈ ವಿದ್ಯಾರ್ಥಿಗಳ ಕಾರ್ಯ ಬೇರೆಯವರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದ್ದಾರೆ. ಜೀವನ ಸಾರ್ಥಕವಾಗಬೇಕಾದರೆ ಸತ್ಕಾರ್ಯಗಳನ್ನು ಮಾಡಬೇಕು, ಅನ್ನದಾನಕ್ಕಿಂತ ವಿದ್ಯಾ ದಾನ ಶ್ರೇಷ್ಠ ಎಂದು ಹೇಳಿದರು.
ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ ಹೆಚ್ಚು ಹಣ ನೀಡಿದರೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪಾಲಕರಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮಕ್ಕಳಿಗೆ ನೀಡುವುದು ಹೆತ್ತವರ ಹಾಗೂ ಶಿಕ್ಷಕರ ಕರ್ತವ್ಯ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಇಂದಿನ ಅಯೋಮಯ ವಾತಾವರಣದಲ್ಲಿ ಆಸೆಯ ದೀಪಗಳೆಂದರೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಕೇವಲ ಅಕ್ಷರವಲ್ಲ, ಅನುಭವದ ಶಿಕ್ಷಣ. ಜಾಣ್ಮೆಯ ಶಿಕ್ಷಣವಲ್ಲ ಜೀವನ ಶಿಕ್ಷಣ. ವಿದ್ವತ್ತಿನ ಶಿಕ್ಷಣವಲ್ಲ ವಿವೇಕದ ಶಿಕ್ಷಣ. ನಾವು ನೀಡುವ ಶಿಕ್ಷಣ ಬದುಕಿನ ಸ್ಪರ್ಶವಿರಬೇಕು, ಸಂಸ್ಕೃತಿಯ ಸಂಸ್ಕಾರ ಇರಬೇಕು ಎಂದು ಹೇಳಿದರು.
ಗೌರವ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಿಗ್ಗಾವ್ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಾರ್ಯದಲ್ಲಿ ಸೇವೆಯಲ್ಲಿರುವ ಬಿ.ವಿ. ಹಿರೇಮಠ್ ಅವರು ಗುರುವಂದನೆ ಸ್ವೀಕರಿಸಿ ಮಾತನಾಡಿ ಪ್ರೌಢಶಾಲೆಗೆ ವರ್ಚುವಲ್ ಲ್ಯಾಬ್ ಮಟೀರಿಯಲ್ ನೀಡುವುದಾಗಿ ಭರವಸೆ ನೀಡಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ರಾಘವೇಂದ್ರ ನಾಡಿಗೇರ ಅಧ್ಯಕ್ಷತೆವಹಿಸಿ ಮಾತನಾಡಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ಕಾಳಜಿ ವಹಿಸಿರುವರು, ಶಿಕ್ಷಕರ ಪ್ರಾಮಾಣಿಕ ಹಾಗೂ ಸಮರಾ್ಣ ಮನೋಭಾವದಿಂದ ವೃತ್ತಿ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಗುರುಗಳಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಶಿಕ್ಷಕರ ಪರವಾಗಿ ಸೌಮ್ಯಾ ಬಸೇಗಣ್ಣಿ ವಿದ್ಯಾರ್ಥಿಗಳ ಪರವಾಗಿ ಚಂದ್ರು ಈಳಿಗೇರ, ವಿರುಪಾಕ್ಷಿ ಹೆಡಿಗೊಂಡ, ಗಣೇಶ್ ಕಡ್ಲಿ, ಪರಮೇಶ ಅಗಸಿಬಾಗಿಲ, ಪ್ರೇಮಾ ಚಕ್ರವರ್ತಿ, ತ್ರಿವೇಣಿ ಬಸೇಗಣ್ಣಿ, ಇಮ್ತಿಯಾಜ್ ಮಿಸ್ರಿಕೋಟಿ, ಅನ್ನಪೂರ್ಣ ಸಣ್ಣಪ್ಪನವರ ಮಾತನಾಡಿದರು. ಗ್ರಾಮದ ಗಣ್ಯರಾದ ಶಿವಪುತ್ರ್ಪ ಬಸೇಗಣ್ಣಿ, ಚನ್ನವೀರ್ಪ ಬಸೇಗಣ್ಣಿ, ರೇಣುಕಾ ಹಲಕಣ್ಣನವರ, ಹೇಮಾ ದೊಡ್ಡಮನಿ, ಶಿಲ್ಪಾ ಸಂಕಣ್ಣನವರ, ಮಲ್ಲಪ್ಪ ಮಣ್ಣೂರ್ ಶಿಕ್ಷಕರು ವೇದಿಕೆಯಲ್ಲಿದ್ದರು. ಕವಿತಾ, ಪೂರ್ಣಿಮಾ ಪ್ರಾರ್ಥಿಸಿದರು. ಮಂಜುನಾಥ್ ವರೂರ ಸ್ವಾಗತಿಸಿದರು. ರಾಘವೇಂದ್ರ ಈಳಿಗೆರ ನಿರೂಪಿಸಿದರು.ರವಿರಾಜ್ ಇಟಗಿ ವಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 