ರಷ್ಯಾದೊಂದಿಗೆ ಸಂಘರ್ಷ ಬಯಸುವುದಿಲ್ಲ: ಜೋ ಬೈಡೆನ್
ವಾಷಿಂಗ್ಟನ್, ಎಪ್ರಿಲ್ 16: ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದ ನಂತರ ಅಮೆರಿಕ ರಷ್ಯಾದೊಂದಿಗೆ ಯಾವುದೆ ಸಂಘರ್ಷವನ್ನು ಬಯಸುವುದಿಲ್ಲ ಎಂದು ಅಧ್ಯಕ್ಷ ಜೋ ಬಿಡನ್ ಸ್ಪಷ್ಠಪಡಿದ್ದಾರೆ.
ಅಮೆರಿಕ ರಷ್ಯಾದೊಂದಿಗಿನ ಉಲ್ಬಣ ಮತ್ತು ಸಂಘರ್ಷವನ್ನು ಬಯಸುವುದಿಲ್ಲ ಎಂದು ಬೈಡೆನ್ ಗುರುವಾರ ಹೇಳಿದರು. ಹಿಂದಿನ ದಿನ, ವಾಷಿಂಗ್ಟನ್ ರಷ್ಯಾದ 32 ಘಟಕಗಳು ಮತ್ತು ವ್ಯಕ್ತಿಗಳ ಮೇಲೆ 2020 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ ಸಾಫ್ಟ್‌ವೇರ್ ಪೂರೈಕೆ ಸರಪಳಿ ನೆಟ್‌ವರ್ಕ್‌ಗಳನ್ನು ಹ್ಯಾಕಿಂಗ್ ಮಾಡಿದ್ದಕ್ಕಾಗಿ ನಿರ್ಬಂಧಗಳನ್ನು ವಿಧಿಸಿತ್ತು ಆದರೆ ಚುನಾವಣೆಗಳ ಹಸ್ತಕ್ಷೇಪ ದ ಆರೋಪಗಳನ್ನು ರಷ್ಯಾ ಪದೇ , ಪದೇ ನಿರಾಕರಿಸುತ್ತಲೇ ಇದೆ.