ಯುವಕನ ಕಣ್ಣಿನಿಂದ ಜೇನು ಹುಳುವಿನ ಮುಳ್ಳನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು
Doctors successfully remove a bee stinger from a young man's eye
ಲೋಕದರ್ಶನ ವರದಿ
ಬೆಳಗಾವಿ 31: 18 ವರ್ಷದ ಯುವಕನೊಬ್ಬ ಎಡ ಕಣ್ಣಿನಲ್ಲಿ ತೀವ್ರವಾದ ನೋವು, ಚುಚ್ಚುವಿಕೆ, ಕೆಂಪಾಗುವಿಕೆ ಹಾಗೂ ಕಣ್ಣಿನಲ್ಲಿ ಅಸಹಜ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆ ಯಳ್ಳೂರ ರಸ್ತೆಯಲ್ಲಿರುವ ಕೆ.ಎಲ್.ಇ. ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನೇತ್ರ ವಿಭಾಗಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.
ರೋಗಿಯ ಮಾಹಿತಿ ಪ್ರಕಾರ, ಸುಮಾರು 2ಹಿ3 ದಿನಗಳ ಹಿಂದೆ ಜೇನು ಹುಳು ಕಣ್ಣಿಗೆ ಬಡಿದ ಘಟನೆ ಸಂಭವಿಸಿತ್ತು. ಬಳಿಕ ಕಣ್ಣಿನಲ್ಲಿ ನಿರಂತರ ನೋವು ಮತ್ತು ಉರಿಯೂತ ಹೆಚ್ಚಾಗಿದ್ದರಿಂದ ಆಸ್ಪತ್ರೆಯ ಕಣ್ಣಿನ ವಿಭಾಗದ ಹೆಸರಾಂತ ನೇತ್ರ ತಜ್ಞರಾದ ಡಾ. ವಿಷಾಲ ಕಾಖಂಡಕಿ ಅವರನ್ನು ಭೇಟಿ ನೀಡಲಾಗಿತ್ತು.
ವೈದ್ಯಕೀಯ ಪರೀಶೀಲನೆ ವೇಳೆ ಎಡ ಕಣ್ಣಿನ ಮೇಲ್ಭಾಗದ ಲಿಂಬಲ್ ಪ್ರದೇಶದಲ್ಲಿ ಸತ್ತ ಜೇನು ಹುಳು ಪತ್ತೆಯಾಗಿದ್ದು, ಅದನ್ನು ತಕ್ಷಣವೇ ವೈದ್ಯರು ಸುರಕ್ಷಿತವಾಗಿ ತೆಗೆದುಹಾಕಿದರು. ಆದರೆ ಹೆಚ್ಚಿನ ತಪಾಸಣೆಯಲ್ಲಿ ಜೇನು ಹುಳಿನ ಸ್ಟಿಂಗರ್ (ಮುಳ್ಳು) ಕಾರ್ನಿಯಾ ಸ್ಟ್ರೋಮಾ ಒಳಭಾಗದಲ್ಲಿ ಉಳಿದಿರುವುದು ಕಂಡುಬಂದಿತು. ಆದುದರಿಂದ ಲೋಕಲ್ ಅನಸ್ತೇಶಿಯಾದಡಿ (ಐಠಚಿಟ ಂಟಿಚಿಣಚಿ) ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಸಿ, ಕಾರ್ನಿಯಾದೊಳಗಿದ್ದ ಜೇನು ಹುಳಿನ ಮುಳ್ಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಸ್ತುತ ರೋಗಿಯ ದೃಷ್ಟಿ ಆರೋಗ್ಯ ಸ್ಥಿತಿಯಲ್ಲಿದ್ದು ಹಾಗೂ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಾ. ಹೆಚ್.ಬಿ. ರಾಜಶೇಖರ, ನಿರ್ದೇಶಕರು, (ಯು.ಎಸ್.ಎಮ್. ಕೆಎಲ್.ಇ) ಅವರು ಮಾತನಾಡಿ, “ಆಸ್ಪತ್ರೆಯ ವೈದ್ಯರು ತ್ವರಿತ ಹಾಗೂ ನಿಖರವಾದ ಚಿಕಿತ್ಸೆಯನ್ನು ನೀಡಿ ರೋಗಿಯ ದೃಷ್ಟಿಯನ್ನು ಕಾಪಾಡಿರುವುದು ಶ್ಲಾಘನೀಯ. ಇಂತಹ ಸೂಕ್ಷ್ಮ ಚಿಕಿತ್ಸೆಗಳು ಸಂಸ್ಥೆಯ ವೈದ್ಯಕೀಯ ಪರಿಣತಿ ಮತ್ತು ಸೇವಾ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.
ಶ್ರೀ ನವೀನ್ ಎನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, “ರೋಗಿ ಕೇಂದ್ರಿತ ಸೇವೆ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಹಾಗೂ ಪರಿಣತ ವೈದ್ಯರ ತಂಡದ ಮೂಲಕ ಉತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಆಸ್ಪತ್ರೆಯ ಮುಖ್ಯ ಧ್ಯೇಯವಾಗಿದೆ. ಈ ಯಶಸ್ವಿ ಚಿಕಿತ್ಸೆ ಸಂಸ್ಥೆಯ ಗುಣಮಟ್ಟದ ವೈದ್ಯಕೀಯ ಸೇವೆಗೆ ಮತ್ತೊಂದು ಉದಾಹರಣೆ” ಎಂದು ಅಭಿಪ್ರಾಯಪಟ್ಟರು.
ಡಾ. ಸಂಜಯ ಕಾಂಬಾರ್, ವೈದ್ಯಕೀಯ ಅಧೀಕ್ಷಕರು, “ಕಣ್ಣಿನಂತಹ ಸೂಕ್ಷ್ಮ ಅಂಗಗಳಿಗೆ ಸಂಬಂಧಿಸಿದ ಗಾಯಗಳಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಸಮಯೋಚಿತ ಚಿಕಿತ್ಸೆ ನೀಡಿದ ಪರಿಣಾಮ ರೋಗಿಯ ದೃಷ್ಟಿಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 