ಕೊಪ್ಪಳ

ವಿಕಲಚೇತನರಿಗೆ ದ್ವಿ ಚಕ್ರವಾಹನ ವಿತರಣೆ

ವಿಕಲಚೇತನರಿಗೆ ದ್ವಿ ಚಕ್ರವಾಹನ ವಿತರಣೆ

ಕೊಪ್ಪಳ 18: ದೈಹಿಕ ವಿಕಲಚೇತನರಿಗೆ ವಿಕಲಚೇತನರ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ ಯಂತ್ರ ಚಾಲಿತ ದ್ವಿ ಚಕ್ರವಾಹನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ,ಹಿರಿಯ ನಾಗರಿಕ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ ಅವರು ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿತರಣೆ ಮಾಡಿದರು.

ಈ ಸಮಯದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಸಂಸದರಾದ ಸಂಗಣ್ಣ ಕರಡಿ,ಜಿಲ್ಲಾಧಿಕಾರಿ ವಿಕಾಶ ಕಿಶೋರ,ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪೌಜೀಯಾ ತರನ್ನುಮ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ವಿಕಲಚೇತನ ಕಲ್ಯಾಣಾಧಿಕಾರಿ ಶ್ರೀದೇವಿ,ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ,ಉಪಾಧ್ಯಕ್ಷರಾದ ಈರಪ್ಪ ಕರೆಕುರಿ  ಮುಂತಾದವರು ಹಾಜರಿದ್ದರು.

ಸುದ್ದಿ ಓದಿ