ಮೂಡಲಗಿ

ಅಮ್ಮಾ ಪೌಂಡೇಷನ್‍ನಿಂದ ಆಹಾರ ಕಿಟ್ ವಿತರಣೆ

ಅಮ್ಮಾ ಪೌಂಡೇಷನ್‍ನಿಂದ ಆಹಾರ ಕಿಟ್ ವಿತರಣೆ
ಮೂಡಲಗಿಯಲ್ಲಿ ಅಮ್ಮಾ ಪೌಂಡೇಷನ್ ಸಂಸ್ಥೆ ರಾಯಬಾಗ ಹಾಗೂ ಗುಂಜ ಸಂಸ್ಥೆ ಬೆಂಗಳೂರು ಆಶ್ರಯದಲ್ಲಿ ಪುರುಷ ಹಾಗೂ ಮಹಿಳೆಯರಿಗೆ

ಮೂಡಲಗಿ 28: ಅಮ್ಮಾ ಪೌಂಡೇಷನ್ ಸಂಸ್ಥೆ ರಾಯಬಾಗ ಹಾಗೂ ಗುಂಜ ಸಂಸ್ಥೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸ್ಮಶಾನ ಭೂಮಿ ಹಾಗೂ ಕಿನಾಲ ಸ್ವಚ್ಛತೆ ಮಾಡಿದ ಪುರುಷ ಹಾಗೂ ಮಹಿಳೆಯರಿಗೆ ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಂದರವ್ವಾ ಬಂಗೆನ್ನವರ ಮಾತನಾಡುತ್ತ, ಈ ಸಂಸ್ಥೆಯು ಚಿಕ್ಕೊಡಿ, ಗೋಕಾಕ ಮತ್ತು ರಾಯಬಾಗ ತಾಲೂಕುಗಳಲ್ಲಿ ಒಟ್ಟು 38 ಗ್ರಾಮಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಮತ್ತು ಆಹಾರ ಸಾಮಗ್ರಿ ಕಿಟ್ ವಿತರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸ್ಥಳಿಯ ಮುಖಂಡರಾದ ಈರಪ್ಪ ಢವಳೇಶ್ವರ ಮಾತನಾಡಿ, ಗ್ರಂಥಾಲಯ ಮತ್ತು ಮಕ್ಕಳ ಕಲಿಕಾ ಸಾಮಗ್ರಿಗಳನ್ನು ವಿತರಿಸುವುದು, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ಇಟ್ಟುಕೊಂಡು ಮಕ್ಕಳಲ್ಲಿ ಸ್ಪರ್ಧಾ ಮನೋಭಾವಗಳನ್ನು ಮೂಡಿಸುವುದು, ದೇವದಾಸಿ ಪದ್ದತಿ ನಿರ್ಮೂಲನೆ, ಬಾಲ್ಯ ವಿವಾಹ ತಡೆ, ಬಾಲ ಕಾರ್ಮಿಕರ ಪದ್ದತಿ ನಿರ್ಮೂಲನೆ, ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯಗಳ ತಡೆಗೆ ಅರಿವು ಮೂಡಿಸುವುದು ಮತ್ತು ಸರ್ಕಾರಿ ಅಧಿಕಾರಿಗಳ ಜೋತೆ ಸಭೆ ನಡೆಸಿ ಚರ್ಚಿಸಿ ಸಮಸ್ಯೆಗಳನ್ನು ಕಂಡುಹಿಡಿದು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಅಭಿವೃದ್ಧಿಗಾಗಿ ಮತ್ತು ಬಡವರಿಗಾಗಿ ಸಹಾಯ ಮಾಡುತ್ತಿರುವ ಈ ಸಂಸ್ಥೇಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಾರ್ಯದರ್ಶಿ ಶೋಭಾ ಗಸ್ತಿ, ಕಾರ್ಯಕರ್ತರಾದ ಕಲ್ಲಪ್ಪ ಮಾಂಗ, ಮಂಜುಳಾ ಹರಿಜನ, ಕಾಂಚನಾ ಮೇತ್ರಿ, ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ