ಸಚಿವ ಸಂಪುಟದಲ್ಲಿ ಪರಿಗಣಿಸಲು ಧರನಾಯಿಕ ಆಗ್ರಹ!

ಸಚಿವ ಸಂಪುಟದಲ್ಲಿ ಪರಿಗಣಿಸಲು ಧರನಾಯಿಕ ಆಗ್ರಹ! Dharana leader demands consideration in the cabinet!

ಬೆಳಗಾವಿ 1: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಆರ್. ಬಿ. ತಿಮ್ಮಾಪುರ ಅವರಿಗೆ ಉಪ ಮುಖ್ಯಮಂತ್ರಿ ಬೆಳಗಾವಿ ಶಾಸಕ ಆಶೀಫ್ (ರಾಜು) ಶೇಠ್ ಅವರಿಗೆ ಸಚಿವ ಸ್ಥಾನ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೆಪಿಸಿಸಿ ಎಸ್ ಸಿ ವಿಭಾಗದ ರಾಜ್ಯ ಸಂಚಾಲಕ ಗಜು ಧರನಾಯಿಕ ಅವರು ಆಯ್ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಗ್ರಹಿಸಿದ್ದಾರೆ. ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು ಮೂವರು ಗಣ್ಯರಿಗೆ ಅವಕಾಶ ನೀಡುವುದರಿಂದ ಪ್ರಾದೇಶಿಕ ಸಮಾನತೆ, ಉತ್ತರ ಕರ್ನಾಟಕ ಅಭಿವೃದ್ಧಿ, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದು ಅವರು ಖರ್ಗೆ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.