ಮೂಡಲಗಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯ: ಮನ್ನಿಕೇರಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯ: ಮನ್ನಿಕೇರಿ

ಲೋಕದರ್ಶನ ವರದಿ

ಮೂಡಲಗಿ 14: ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಧಾರ್ಮಿಕ ಕ್ಷೇತ್ರ ಅಷ್ಟೇ ಅಲ್ಲದೇ ಬಡಜನರ ಅಭಿವೃದ್ಧಿ ಹಾಗೂ ಅದರ ಜೊತೆಗೆ ಶಿಕ್ಷಣ ಬಗ್ಗೆ ಸಾಕಷ್ಟು ಯೋಜನೆಗಳನ್ನು ರೂಪಿಸುವ ಮೂಲಕ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಜ್ಞಾನದೀಪ ಶಿಕ್ಷಕರ ನೇಮಕಾತಿ ಹಾಗೂ ಬಡಮಕ್ಕಳ ಕಲಿಕೆಗಾಗಿ ಸುಜ್ಞಾನನಿಧಿ ಶಿಷ್ಯವೇತನ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು.

ಪಟ್ಟಣ ಬಿಇಒ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಕಾರ್ಯಕ್ರಮ ಅಡಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಜ್ಞಾನದೀಪ ಶಿಕ್ಷಕರ ನೇಮಕಾತಿ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಕ್ಷೇತ್ರದಲಿಯೂ ಸಹಾಯ ಹಸ್ತ ಮಾಡುವಂತ ಏಕೈಕ ಸಂಸ್ಥೆ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಾಗಿದು, ಡಾ.ವಿರೇಂದ್ರ ಹೆಗಡೆ  ಶ್ರೀಗಳ ಹೊಸ ಹೊಸ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದು ಈ ಸಂಸ್ಥೆಯ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ  ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಮಕ್ಕಳ ಕಲಿಕೆಗೆ ತೊಂದರೆ ಉಂಟಾಗಬಾರದೆಂದು ಪ್ರತಿಯೊಂದು ವಲಯದಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿ ಅವರಗೆ ಗೌರವಧನವನ್ನು ಸಂಸ್ಥೆಯಿಂದ ನೀಡಲಾಗುತ್ತಿದು, ಮೂಡಲಗಿ ಬಿಇಒ ಅವರ ವಿಶೇಷ ಕಾಳಜಿಯಿಂದ ಹೆಚ್ಚು ಅತಿಥಿ ಶಿಕ್ಷಕರು ನೀಡಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷ ಹನಮಂತ ಗುಡ್ಲಮನಿ, ಕಾನಿಪ ಮೂಡಲಗಿ ತಾಲೂಕಾ ಅಧ್ಯಕ್ಷ ಕೆ.ಬಿ.ಗಿರೆಣ್ಣವರ, ಕಾರ್ಯದಶರ್ಿ ಮಲ್ಲು ಬೋಳನವರ, ಹನಮಂತ ಸತರಡ್ಡಿ ಮತ್ತಿತರರು ಇದ್ದರು. ಯೋಜನೆಯ ತಾಲೂಕ ಯೋಜನಾಧಿಕಾರಿ ಆಜು ನಾಯ್ಕ ಸ್ವಾಗತಿಸಿದರು.  ಕೃಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ  ಮತ್ತು ವ್ಯವಸ್ಥಾಪಕ ಪರಶುರಾಮ ಚಲವಾದಿ ನಿರೂಪಿಸಿದರು, ಕಾಮಾಕ್ಷಿ ನಾಯ್ಕ ವಂದಿಸಿದರು 

ಸುದ್ದಿ ಓದಿ