ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ : ಗದಗ ಜಿಲ್ಲಾಧಿಕಾರಿ ಹಿರೇಮಠ

ಗದಗ 16: ಜನೆವರಿ ಮೊದಲನೇ ವಾರದಲ್ಲಿ ಎರಡು ದಿನ ನಗರದ ಪಾಶ್ರ್ವನಾಥ ಜೈನ್ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್  ವಸ್ತು ಪ್ರದರ್ಶನ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮದ  ಯಶಸ್ವಿಗಾಗಿ   ವಿವಿಧ ಇಲಾಖೆಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ ವಸ್ತು ಪ್ರದರ್ಶನ  ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. ಈ ಕಾರ್ಯಕ್ರಮವು ಭಾರತ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿನ್ಯಾಸಗೊಂಡು ಆಯೋಜನೆಯಾಗುತ್ತಿರುವ  ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ.  ವಿದ್ಯಾರ್ಥಿಗಳಲ್ಲಿ  ವೈಜ್ಞಾನಿಕ ಆಸಕ್ತಿ ಬೆಳೆಸಿ ಸಂಶೋಧನಾ ಕ್ಷೇತ್ರಕ್ಕೆ ಸೆಳೆಯುವ ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.  

ಡಯಟ್ದ ಪ್ರಾಚಾರ್ಯರಾದ ಎಚ್.ಎಮ್. ಖಾನ್ ಅವರು ಸರ್ವರನ್ನು ಸ್ವಾಗತಿಸಿ   ಗದಗ  ಹಾಗೂ ಧಾರವಾಡ  ಜಿಲ್ಲೆಯ   245  ವಿದ್ಯಾರ್ಥಿಗಳು   ಈ  ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.  ಕಾರ್ಯಕ್ರಮದ  ಅಚ್ಚುಕಟ್ಟು   ನಿರ್ವಹಣೆಗಾಗಿ   ವಿವಿಧ ಸಮಿತಿಗಳನ್ನು   ರಚಿಸಲಾಗಿದೆ ಎಂದು  ತಿಳಿಸಿದರು.   

ಸಭೆಯಲ್ಲಿ  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ, ಉಪನಿದರ್ೇಶಕರ ಕಚೇರಿ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್,  ಡಯಟ್ ದ ಉಪನ್ಯಾಸಕರಾದ ಶರಣು ಗೋಗೇರಿ,  ಡಯಟ್ದ ಉಪನ್ಯಾಸಕರುಗಳು,   ಪಾಶ್ರ್ವನಾಥ ಶಾಲೆಯ ಮುಖ್ಯಸ್ಥರು,   ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.