ಮುಧೋಳ

ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಅಭಿರುಚಿ ಬೆಳೆಸಿ:ವಿದ್ಯಾ ವಾಲಿ

ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ  ಅಭಿರುಚಿ ಬೆಳೆಸಿ:ವಿದ್ಯಾ ವಾಲಿ

ಮುಧೋಳ: ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಕಾಗಾದು. ಜತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ ಇದರ ಸದುಪಯೋಗ ಪಡಿಸಿಕೊಂಡ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಲ್ಲಿರಬೇಕು ಎಂದು ಶ್ರೀ ಶಿರಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ರಾಜೇಶ ವಾಲಿ ಹೇಳಿದರು. 

   ಭಾನುವಾರ ಸಂಜೆ   ಶ್ರೀ ಸಾಯಿನಿಕೇತನ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡ ಸಾಯಿ ಸಮ್ಮೇಳನದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ ಅವರು ಮಾತನಾಡಿದರು. 

  ಕಾರ್ಯಾಧ್ಯಕ್ಷ ರಾಜೇಶ ವಾಲಿ , ಪ್ರಾಚಾರ್ಯ ರಮೇಶ ಪೂಜಾರಿ , ಸಂದೀಪ ಸೋಮಸುಳೆ , ಸಾಗರ ಕೋಂಡ್ರೆ ವೆಂಕಟೇಶ ಪಾಟೀಲ ಹಾಗೂ ಸಾಯಿ ನಿಕೇತನ ಕಾಲೇಜು ಮತ್ತು ಹೈಸ್ಕೂಲ್ ವಿಭಾಗದ ಎಲ್ಲ ಪ್ರಾಚಾರ್ಯರು ಇದ್ದರು . 


ಸುದ್ದಿ ಓದಿ