ಅಂತರರಾಷ್ಟ್ರೀಯ

ಕ್ಯಾಲಿಫೋರ್ನಿಯಾದಲ್ಲಿ ಹೊಸ ರೂಪಾಂತರಿ ಕೊರೋನ ಸೋಂಕು ಪ್ರಕರಣ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ  ಹೊಸ ರೂಪಾಂತರಿ ಕೊರೋನ ಸೋಂಕು  ಪ್ರಕರಣ ಪತ್ತೆ

ವಾಷಿಂಗ್ಟನ್, ಡಿಸೆಂಬರ್ 31: ಅಮೆರಿಕದ  ದಕ್ಷಿಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ಹೊಸ ರೂಪಾಂತರಿ  ಕೊರೋನ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ಅಧಿಕಾರಿ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.

ಇತರೆ  ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಹೊಸ ರೂಪಾಂತರಿ ಕೋರೋನ ಸೋಂಕಿನ ವಿರುದ್ಧ ಕರೋನ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ ಎಂದು  ಆರೋಗ್ಯ ಅಧಿಕಾರಿಗಳು ಭರವಸೆಯಿಟ್ಟಿದ್ದಾರೆ ಎಂದು ಫೌಸಿ ಹೇಳಿದರು.

ಹೊಸ ಸ್ವರೂಪದ  ಒಂದು ಪ್ರಕರಣವನ್ನು ದೃಡಪಡಿಸಲಾಗಿದೆ.  ಡಿಸೆಂಬರ್ ನಲ್ಲಿ  ಯುಕೆ ಅಧಿಕಾರಿಗಳು ದೇಶದಲ್ಲಿ ಹೊಸ ಸ್ವರೂಪದ ಕರೋನ ಸೋಂಕು  ಪತ್ತೆಯಾಗಿದೆ ಎಂದು ಘೋಷಿಸಿದ್ದರು.  ಹೊಸ ರೂಪಾಂತರಿ ಕೊರೋನ ಸೋಂಕು ಶೇ  70 ರಷ್ಟು ವೇಗವಾಗಿ ಹರಡಲಿದೆ ಎಂದು ಹೇಳುತ್ತಿರುವುದೇ ಬಹಳ ಆತಂಕಕ್ಕೆ ಕಾರಣವಾಗಿದೆ. 

ಸುದ್ದಿ ಓದಿ