ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ
ಲೋಕದರ್ಶನ ವರದಿ
ಹೂವಿನಹಡಗಲಿ 18 : ಸರಕಾರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ತಾಲೂಕು ಘಟಕ ಹಾಗೂ ಕಾರ್ಯಕರ್ತರು ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು. ತಾಲ್ಲೂಕಿನ ಲ್ಲಿ 40ರಿಂದ 44 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದು. ಇದೀಗ ಬೆಲೆ ಕುಸಿತದಿಂದ ರೈತ ರು ಆತಂಕ ದಲ್ಲಿದ್ದು, ಸದ್ಯದಲ್ಲೇ ?19,00 ್ಷರಿಂದ ? 19,50 ರೂ.ಮಾರುಕಟ್ಟೆ ಬೆಲೆ ಇದ್ದು, , ಸರಕಾರ ಬೆಂಬಲ ಬೆಲೆ 2,400 ರೂ. ಇದ್ದು, ಕೂಡಲೇ ಸರಕಾರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ರು ಅಗ್ರಹಿಸಿದ್ದರು. ಈಗಾಗಲೇ ಶೇ.25 ರಷ್ಟು ರೈತರು ಖರೀದಿದಾರರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಸದ್ಯದಲ್ಲೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರೈತ ಸಂಘದ ಜಿಲ್ಲಾ ಮುಖಂಡರಾದ ಅಂಚಿ ಮಂಜುನಾಥ, ಉಪಾಧ್ಯಕ್ಷ ವಿ.ಬಿ.ಚನ್ನಬಸಪ್ಪ. ಪ್ರದಾನ ಕಾರ್ಯ ದರ್ಶಿ ಎಂ.ಶಿವರಾಜ್ ಮತ್ತು ಗೀರೀಶ ಇದ್ದರು.