ಮೂಡಲಗಿ

ಅನಧಿಕೃತ ಟ್ಯೂಷನ್ ಟ್ಯೂಷನ್, ತರಬೇತಿ ಕೇಂದ್ರಗಳ ಮೇಲೆ ಕ್ರಮಕ್ಕೆ ಒತ್ತಾಯ

ಅನಧಿಕೃತ ಟ್ಯೂಷನ್ ಟ್ಯೂಷನ್, ತರಬೇತಿ ಕೇಂದ್ರಗಳ ಮೇಲೆ ಕ್ರಮಕ್ಕೆ ಒತ್ತಾಯ

ಮೂಡಲಗಿ 06: ಮೂಡಲಗಿ ಶೈಕ್ಷಣಿಕ ವಲಯದ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ನಡೆಯುವ ಟ್ಯೂಷನ್, ಮನೆ ಪಾಠಗಳ ತರಬೇತಿ ಕೇಂದ್ರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಅವರಿಗೆ ಫಸ್ಟ್ ಕನರ್ಾಟಕ ಒಕ್ಕೂಟ(ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳೊಕ್ಕೂಟ) ದ ರಾಜ್ಯಾಧ್ಯಕ್ಷ ಎನ್.ಎಚ್.ಮುಕ್ಕನ್ನವರ ಮನವಿ ಸಲ್ಲಿಸಿದ್ದರು. 

ಪಟ್ಟಣದ ಬಿಇಒ ಕಚೇರಿಯಲ್ಲಿ ಬಿಇಒ ಅಜೀತ ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದ ಎನ್.ಎಚ್.ಮುಕ್ಕನ್ನವರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮೂಡಲಗಿ ಶೈಕ್ಷಣಿ ವಲಯದಲ್ಲಿ ಅನಧಿಕೃತವಾಗಿ ಟ್ಯೂಷನ್, ಮನೆ ಪಾಠಗಳ ತರಬೇತಿ ಕೇಂದ್ರಗಳಲ್ಲಿ ಸರಕಾರಿ ಶಾಲೆಯ ಮಕ್ಕಳು ಓದುತ್ತಿದು, ತರಬೇತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸರಕಾರದ ಸೌಲಭ್ಯಗಳು ದುರುಪಯೋಗವಾಗುವ ಲಕ್ಷಣಗಳು ಕಂಡು ಬರುತ್ತಿದರಿಂದ, ಸರಕಾರ ಸೌಲಭ್ಯಗಳು ದುರುಪ ಯೋಗವಾಗಬಾರದು ಎಂದು ಬಿಇಒ ಅವರಿಗೆ ಮನವಿ ಸಲ್ಲಿಸಿ ಯಾವ ಶಾಲೆಗಳಲ್ಲಿ ವಿದ್ಯಾಥರ್ಿಗಳು ದಾಖಲಾತಿ ಹೊಂದಿದ್ದಾರೆ ಆ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಓದುವ ಅವಕಾಶ ಮಾಡಿಕೊಡಬೇಕೆಂದು ತಿಳಿಸಲ್ಲಾಗಿದೆ. ಬಿಇಒ ಅವರು ಮೂಡಲಗಿ ವಲಯದಲ್ಲಿ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಬರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.




 

ಸುದ್ದಿ ಓದಿ