ಅಂತರರಾಷ್ಟ್ರೀಯ

ಟೆಕ್‌ ದೈತ್ಯರಿಂದ ಶೇ 15 ರಷ್ಟು ತೆರಿಗೆ ಸಂಗ್ರಹಿಸಲು ಭಾರತ ಸೇರಿ 136 ದೇಶಗಳ ನಿರ್ಧಾರ

ಟೆಕ್‌  ದೈತ್ಯರಿಂದ   ಶೇ 15 ರಷ್ಟು ತೆರಿಗೆ   ಸಂಗ್ರಹಿಸಲು  ಭಾರತ  ಸೇರಿ 136 ದೇಶಗಳ ನಿರ್ಧಾರ

ಪ್ಯಾರಿಸ್‌,  ಅ 9: ಟೆಕ್, ಸೋಷಿಯಲ್‌  ಮೀಡಿಯಾ,  ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ   ಒಗ್ಗೂಡಿ   ಬಿಸಿ ಮುಟ್ಟಿಸಲು    ಜಗತ್ತು   ಸಿದ್ಧವಾಗಿದೆ.  ಜಾಗತಿಕ ತೆರಿಗೆ ಹೆಸರಿನಲ್ಲಿ ಕನಿಷ್ಠ ಶೇ .15 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿವೆ.   ಈ ಸಂಬಂಧ  136 ದೇಶಗಳು (ಭಾರತ ಒಳಗೊಂಡಂತೆ)   ಒಪ್ಪಿಗೆ ಸೂಚಿಸಿದ್ದು, ಪಾಕಿಸ್ತಾನ ಸೇರಿದಂತೆ ನಾಲ್ಕು ದೇಶಗಳು   ಮಾತ್ರ  ಈ  ಒಪ್ಪಂದದಿಂದ ದೂರ ಉಳಿದಿವೆ.

ಆರ್ಥಿಕ ಸಹಕಾರ  ಹಾಗೂ   ಅಭಿವೃದ್ಧಿ (OECD) ಸಂಘಟನೆಯ  ಸಭೆ  ಶುಕ್ರವಾರ ಪ್ಯಾರಿಸ್ ನಲ್ಲಿ ನಡೆಯಿತು.  ತಮ್ಮ ತಮ್ಮ  ದೇಶಗಳಲ್ಲಿ   ಕಾರ್ಯಾಚರಣೆ  ನಡೆಸಿಕೊಳ್ಳಲು   ಗೂಗಲ್, ಫೇಸ್ಬುಕ್, ನೆಟ್ಫ್ಲಿಕ್ಸ್, ಮೈಕ್ರೋಸಾಫ್ಟ್, ಅಮೆಜಾನ್  ಹಾಗೂ  ಇನ್ನಿತರ  ಟೆಕ್‌  ಸಂಸ್ಥೆಗಳ    ಮೇಲೆ   ಕನಿಷ್ಠ ಶೇ. 15 ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿವೆ.  ಒಟ್ಟು 140 ದೇಶಗಳಲ್ಲಿ, ಶ್ರೀಲಂಕಾ, ಕೀನ್ಯಾ, ನೈಜೀರಿಯಾ ಹಾಗೂ  ಪಾಕಿಸ್ತಾನ  ಒಪ್ಪಂದದಿಂದ  ದೂರಸರಿದಿವೆ.   ಆದರೆ,  ಟೆಕ್  ದೈತ್ಯರಿಂದ ತೆರಿಗೆ  ಸಂಗ್ರಹ  ನಿರ್ಣಯ    2023 ರಿಂದ ಜಾರಿಗೆ ಬರಲಿದೆ.

ಇದರ  ಜೊತೆಗೆ,     ಏಕಪಕ್ಷೀಯ   ತೆರಿಗೆ  ವಿಧಿಸುವ   ನಿರ್ಧಾರಗಳನ್ನು ತಕ್ಷಣವೇ  ಹಿಂಪಡೆಯುವುದಾಗಿ  OECD ಸದಸ್ಯ ರಾಷ್ಟ್ರಗಳು  ಘೋಷಿಸಿವೆ.  ಅಕ್ಟೋಬರ್ 13 ರಂದು ವಾಷಿಂಗ್ಟನ್‌ನಲ್ಲಿ  ನಡೆಯಲಿರುವ  ಜಿ 20 ಹಣಕಾಸು ಸಚಿವರ  ಸಭೆಯಲ್ಲಿ,  ಈ ತಿಂಗಳ ಕೊನೆಯಲ್ಲಿ ರೋಮ್ (ಇಟಲಿ) ನಲ್ಲಿ ನಡೆಯಲಿರುವ ಜಿ 20  ನಾಯಕರ ಸಭೆಯಲ್ಲಿ  ಶೇ  15    ತೆರಿಗೆ ವಿಧಿಸುವ   ಕ್ರಮವನ್ನು  ಅಧಿಕೃತವಾಗಿ ಘೋಷಿಸಲಿದ್ದಾರೆ. ಕನಿಷ್ಠ ತೆರಿಗೆ  ಶೇ. 15 ಆಗಿದ್ದರೂ, ಗರಿಷ್ಠ ಮೊತ್ತ  ಎಷ್ಟು ಎಂಬುದನ್ನು  ನಿಗದಿಪಡಿಸಲಾಗಿಲ್ಲ.

ಇನ್ನೂ  ಭಾರತದ ವಿಷಯದಲ್ಲಿ,  ಡಿಜಿಟಲ್ ಜಾಹೀರಾತು ಸೇವೆಗಳ ಮೇಲೆ ನೇರವಾಗಿ  ಶೇ 6 ​​ರಷ್ಟು  ತೆರಿಗೆ ವಿಧಿಸಲು 2016 ರಲ್ಲಿ ನಿರ್ಧರಿಸಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ 1,600 ಕೋಟಿ  ಸಂಗ್ರಹವಾಗಿದ್ದು,   ಕಳೆದ   ವರ್ಷಕ್ಕೆ  ಹೋಲಿಸಿದರೆ  ಇದು ದ್ವಿಗುಣಗೊಂಡಿರುವುದು ವಿಶೇಷ.  ಇನ್ನೂ  2020 ರಲ್ಲಿ ಅನಿವಾಸಿ ಇ-ಕಾಮರ್ಸ್ ಬಳಕೆದಾರರ ಮೇಲೆ   2 ಶೇಕಡಾ ತೆರಿಗೆ ವಿಧಿಸುತ್ತದೆ.

ಸುದ್ದಿ ಓದಿ