ಅಂತರರಾಷ್ಟ್ರೀಯ

ಹೈಟಿ ಭೂಕಂಪ; ಸಾವನ್ನಪ್ಪಿದವರ ಸಂಖೈ 1300ಕ್ಕೆ ಏರಿಕೆ

ಹೈಟಿ ಭೂಕಂಪ;  ಸಾವನ್ನಪ್ಪಿದವರ ಸಂಖೈ 1300ಕ್ಕೆ ಏರಿಕೆ

ಪೋರ್ಟ್-ಅವು-ಪ್ರಿನ್ಸ್​,  ಆಗಸ್ಟ್‌   16 :  ಕೆರಿಬಿಯನ್   ದ್ವೀಪ ರಾಷ್ಟ್ರ ಹೈಟಿಯಲ್ಲಿ ಶನಿವಾರ   ಸಂಭವಿಸಿದ್ದ  ಭಾರಿ  ಪ್ರಮಾಣದ   ಭೂಕಂಪದಲ್ಲಿ  ಮೃತಪಟ್ಟವರ  ಸಂಖ್ಯೆ 1,300 ಕ್ಕೆ ಏರಿಕೆಯಾಗಿದೆ.  ಸಾವಿನ   ಸಂಖ್ಯೆ  ಮತ್ತಷ್ಟು   ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ.

ಭೂಕಂಪದಲ್ಲಿ    ಹೆಚ್ಚಿನ  ಸಂಖ್ಯೆಯ   ಜನರು  ಗಾಯಗೊಂಡಿದ್ದಾರೆ.  ಬೃಹತ್‌  ಪ್ರಮಾಣ   ಕಟ್ಟಡಗಳು ಕುಸಿದುಬಿದ್ದಿರುವ   ಕಾರಣ   ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು  ರಕ್ಷಿಸಲು  ಅಮೆರಿಕಾ,   ಶೋಧನೆ ಹಾಗೂ  ರಕ್ಷಣಾ ಕಾರ್ಯಾಚರಣೆಗೆ  ತಂಡಗಳನ್ನು ನಿಯೋಜಿಸಿದೆ.

ಬಡತನ, ಕೋವಿಡ್ ಸೋಂಕು, ಆಂತರಿಕ ಹಿಂಸಾಚಾರಗಳಿಂದ ತತ್ತರಿಸಿರುವ ಕೆರಿಬಿಯನ್ ದೇಶ ಹೈಟಿಯಲ್ಲಿ  ಶನಿವಾರ  ಸಂಭವಿಸಿರುವ   ಭೀಕರ  ಭೂಕಂಪ ಮತ್ತೊಂದು ಆಘಾತ ಉಂಟುಮಾಡಿದೆ.


ಸುದ್ದಿ ಓದಿ