ವಸತಿ ಮತ್ತು ನಿವೇಶನಕ್ಕೆ ದಲಿತ ಮುಖಂಡರ ಆಗ್ರಹ: ನೂರಾರು ಮಹಿಳೆಯರ ಲಗ್ಗೆ, ಸೌಲಭ್ಯಕ್ಕೆ ಒತ್ತಾಯ
Dalit leaders demand housing and land: Hundreds of women demand facilities
ರಾಣೆಬೆನ್ನೂರು 27: ನಗರ ಮತ್ತು ತಾಲೂಕಿನ ಮಾದಿಗ ಸಮುದಾಯದ ಬಡ ಜನರಿಗೆ ವಸತಿ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘಟನಾ ಸಮಿತಿಯ ಮುಖಂಡರು ಮತ್ತು ನೂರಾರು ಮಹಿಳೆಯರು ತಹಸಿಲ್ದಾರ್ ಅವರಿಗೆ ತಮ್ಮ ಮನವಿ ಸಲ್ಲಿಸಿದರು. ಬುಧವಾರ ನೂರಾರು ಮಹಿಳೆಯರು ತಹಶೀಲ್ದಾರ್ ಕಚೇರಿ ಎದುರುಗಡೆ ಜಮಾವಣೆಗೊಂಡು ಶಹರ ಮತ್ತು ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬಹುತೇಕವಾಗಿ ಬಡವರೇ ವಾಸವಾಗಿದ್ದು ಅವರಿಗೆ ಸರಿಯಾದ ರೀತಿಯಲ್ಲಿ ಮನೆಗಳಿಲ್ಲ. ಮನೆಯಿದ್ದವರಿಗೆ ಮೂಲಭೂತಗಳ ಸೌಲಭ್ಯ ಇಲ್ಲ. ಐದು ದಶಕಗಳು ಕಳೆದರೂ ಇದುವರೆಗೂ ಸರಕಾರದ ಸೌಲಭ್ಯಗಳು ದೊರೆಯದೆ ಈ ಸಮುದಾಯದ ಮಹಿಳೆಯರು ವಂಚಿತರಾಗಿದ್ದಾರೆ.
ಈ ಹಿಂದೆ ಈ ಸಮುದಾಯಕ್ಕೆ ಗ್ರಾಮದ ಪಕ್ಕದಲ್ಲಿರುವ ಕೆರೆ, ಹೂಳೆ, ಹಳ್ಳ, ದಡದಲ್ಲಿ ಜಾಗ ನೀಡಿದ್ದು, ಅಲ್ಲಿ ಗುಡಿಸಲು ನಿರ್ಮಾಣವಾಗಿದ್ದರು ಅನೇಕ ಬಾರಿ ಸುರಿದ ಮಳೆಗೆ, ಗುಡಿಸಲು ಕೊಚ್ಚಿಕೊಂಡು ಹೋಗಿ ನೆಲಸಮವಾಗುವ ಪರಿಸ್ಥಿತಿಯಲ್ಲಿ ಇದ್ದೇವೆ. ತಾಲೂಕ ದಂಡಾಧಿಕಾರಿಗಳು ಈ ಕೂಡಲೇ ಪರೀಶೀಲನೆ ನಡೆಸಿ, ಬಡ ಜನಾಂಗದವರನ್ನು ಗುರುತಿಸಿ ಕಡು ಬಡವರಿಗೆ ಒಟ್ಟು ಕುಟುಂಬದವರಿಗೆ ಮತ್ತು ನಿವೇಶನ ರಹಿತರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರದ ಗೋಮಾಳದ ಜಾಗದಲ್ಲಿ ವಸತಿಗೆ ಯೋಗ್ಯವಾದ ಸ್ಥಳದಲ್ಲಿ ವಸತಿ ನಿರ್ಮಿಸಿ ಸಮಾನತೆಯ ಬದುಕಿಗೆ ದಾರಿ ಮಾಡಿ ಕೊಡಬೇಕೆಂದು ಸಲ್ಲಿಸಿರುವ ಮನವಿಯಲ್ಲಿ ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ .
ಮನವಿ ಸಲ್ಲಿಸಿ ಮಾತನಾಡಿದ ಹಾವೇರಿ ಜಿಲ್ಲೆ, ರಾಜ್ಯ ಉಪಾಧ್ಯಕ್ಷ ಪಾರ್ವತಿ ಗೋಣಿ ಬಸಮ್ಮನವರ, ಅವರು ತಾವು ನಿರಂತರ ಹೋರಾಟದ ಮುಂಚೂಣಿಯಲ್ಲಿ ಇದ್ದು ಈ ಮೂಲಭೂತ ಸೌಲಭ್ಯದ ಜೊತೆಗೆ ವಸತಿ ರಹಿತರಿಗೆ ವಸತಿಗಾಗಿ ತಾಲೂಕ ಆಡಳಿತಕ್ಕೆ ನಗರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದೆ. ಆದರೆ ಮನವಿ ಸ್ವೀಕರಿಸುವ ಅಧಿಕಾರಿಗಳು ಪ್ರತಿಕ್ರಿಯೆ ನೀಡದೆ ಸುಮ್ಮನಾಗುವುದು ಯಾವ ನ್ಯಾಯ? ಎಂದು ಪ್ರಶ್ನಿಸಿರುವ ಅವರು ಜಿಲ್ಲಾಡಳಿತದೊಂದಿಗೆ ಕೂಡಲೇ ಸಮಾಲೋಚನೆ ನಡೆಸಿ, ಅಗತ್ಯವಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಕೋರಿದರು. ಮುಂಚೂಣಿಯಲ್ಲಿ ಗಾಳೆಮ್ಮ, ಮಂಜವ್ವ, ಪುಟ್ಟಮ್ಮ, ಮಂಜುಳಾ, ಉಷಾ ನಾಗಮ್ಮ, ಸವಿತಾ ಸೇರಿದಂತೆ ವಸತಿ ಮತ್ತು ನಿವೇಶನ ರಹಿತ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 