ಡಿ.ಕೆ.ಎಸ್‌.ಎಸ್‌.ಕೆ ಶಾಖೆಯ ವಾರ್ಷಿಕೋತ್ಸವದ

ಡಿ.ಕೆ.ಎಸ್‌.ಎಸ್‌.ಕೆ  ಶಾಖೆಯ ವಾರ್ಷಿಕೋತ್ಸವದ DKSSK branch anniversary

ಲೋಕದರ್ಶನ ವರದಿ 

ಅಂಕಲಿ 19 : ಸನ್ 1988ರಲ್ಲಿ ಅಂಕಲಿ ಎಂಬ ಪುಟ್ಟ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆಯವರ ಮುಂದಾಳತ್ವದಲ್ಲಿ ಸ್ಥಾಪನೆಯಾದ ಸಂಘವು ಅಂಕಲಿ ಅರ್ಬನ್ ಕೋ-ಆಪ್ ಕ್ರೇಡಿಟ್ ಸೊಸಾಯಿಟಿಯೆಂದು ಸ್ಥಾಪನೆಯಾಗಿ ಸನ್ 2007 ರಲ್ಲಿ ಸೌಹಾರ್ದ ಕಾಯ್ದೆಯಡಿ ಪರಿವರ್ತನೆ ಹೊಂದಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಅಂಕಲಿ ಆಗಿ ತದನಂತರ ಸನ್ 2023ರಲ್ಲಿ ಸೊಸಾಯಟಿ ಪರಿವರ್ತನೆ ಹೊಂದಿ ಈಗ ಡಾ. ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ನಿಯಮಿತ., ಅಂಕಲಿ (ಬಹುರಾಜ್ಯ) ಎಂಬ ನಾಮದೊಂದಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಪ್ರಭಾಕರ ಕೋರೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಇವರುಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೊಂದುತ್ತ ಗಡಿರಾಜ್ಯಗಳಾದ ಮಹಾರಾಷ್ಡ್ರ ್ಘ ಗೋವಾ ರಾಜ್ಯಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಿದೆ. ಎಂದು ಶಾಖಾ ಅಧ್ಯಕ್ಷರಾದ ಶಿವಾನಂದ ಹಕಾರೆ ಹೇಳಿದರು  

ಅವರು ಸೋಮವಾರರಂದು ಡಿ.ಕೆ.ಎಸ್‌.ಎಸ್‌.ಕೆ 5ನೇ ಶಾಖೆಯಾಗಿ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ ರೂ.23.86 ಕೋಟಿ ಠೇವು ಸಂಗ್ರಹಿಸಿ, ರೂ.3.54 ಕೋಟಿ ಸಾಲ ವಿತರಿಸಿ, ರೂ.897.75 ಕೋಟಿ ವಾರ್ಷಿಕ ವಹಿವಾಟು ನಡೆಸಿ ಕಳೆದ ಆರ್ಥಿಕ ವರ್ಷದಲ್ಲಿ ರೂ.65 ಲಕ್ಷ ಲಾಭ ಆಗಿರುತ್ತದೆ ಎಂದು ಶಾಖಾ ಅಧ್ಯಕ್ಷರಾದ ಶಿವಾನಂದ ಹಕಾರೆ ಹೇಳಿದರು ಹಾಗೂ ಶಾಖೆಯ ಸಲಹಾ ಸಮಿತಿಯ ಸದಸ್ಯರು ್ಘ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಎಸ್‌.ಕರೋಶಿ ಇವರ ಮಾರ್ಗದರ್ಶನದಲ್ಲಿ ಶಾಖೆಯು ಹೆಚ್ಚಿನ ರೀತಿಯಲ್ಲಿ ಪ್ರಗತಿ ಪಥದತ್ತ ಮುನ್ನಡೆಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. 

ಶಾಖೆಯ 35ನೇ ವಾರ್ಷಿಕೋತ್ಸವ ನಿಮಿತ್ತ ಶ್ರೀ ಲಕ್ಷ್ಮೀದೇವಿ ಪೂಜೆಯನ್ನು ಸಲಹಾ ಸಮಿತಿಯ ಅಧ್ಯಕ್ಷರಾದ ಶಿವಾನಂದ ಹಕಾರೆ ಹಾಗೂ ಸಿ.ಬಿ.ಕೆ.ಎಸ್‌.ಎಸ್‌.ಕೆ ಕಾರ್ಖಾನೆಯ ವ್ಯವಸಾಪಕ ನಿರ್ದೆಶಕರಾದ ಡಾಽಽ ಆರ್‌. ಬಿ. ಖಾಂಡಗಾಂವೆ ನೇರವೇರಿಸಿದರು ಹಾಗೂ ಗ್ರಾಮೀಣ ಭಾಗದ ಜನರಿಗೆ ಹಲವಾರು ರೀತಿಯ ಆರ್ಥಿಕ ಸೇವೆಗಳನ್ನು ್ಘ ಜೀವ ವಿಮೆ ಹಾಗೂ ವಾಹನ ವಿಮೆ ಒದಗಿಸುತ್ತಾ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಶಾಖೆಯ ಈ ಅಮೋಘವಾದ ಬೆಳವಣಿಗೆಗೆ ಎಲ್ಲ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳ ಪ್ರಮಾಣಿಕ ಸೇವೆ, ಗ್ರಾಹಕರ ಪ್ರೀತಿ ವಿಶ್ವಾಸ ಹಾಗೂ ಸಹಾಯ ಸಹಕಾರ ನೀಡುತ್ತಿರುವುದೇ ಕಾರಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಖಾ ಕಚೇರಿ ಸಂಚಾಲಕರು, ಕಾರ್ಖಾನೆಯ ಅಧಿಕಾರಿವರ್ಗ ಹಾಗೂ ಶಾಖಾ ವ್ಯವಸ್ಥಾಪಕರಾದ ಸಂದೀಪ ಎಸ್ ಜೋಗೋಜೆ ಸೇರಿದಂತೆ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.