ಲಕ್ಷ್ಮೇಶ್ವರ ಮುಕ್ತಿಮಂದಿರದಲ್ಲಿ ಡಿಕೆಶಿಗೆ ವೀರಗಂಗಾಧರ ಸ್ವಾಮಿಗಳ ಆಶೀರ್ವಾದ, ಮುಖ್ಯಮಂತ್ರಿ ಸ್ಥಾನಕ್ಕೆ ಏರಿಕೆ
DKSH receives blessings from Veer Gangadhar Swami at Lakshmeshwara Mukti Mandir, elevated to the pos
ಲೋಕದರ್ಶನ ವರದಿ
ಲಕ್ಷ್ಮೇಶ್ವರ 29: "ಮಹಾ ತಪಸ್ವಿ ಲಿಂ, ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವದ್ಪಾದರ ಕರ್ತೃ ಗದ್ದಿಗೆಯ ಆಶೀರ್ವಾದ ಪಡೆದ ಒಂದು ತಿಂಗಳ ಅಂತರದಲ್ಲಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಒಲದಿದೆ ಇದು ಡಿಕೆ ಶಿವಕುಮಾರ ಅವರು ನಂಬಿರುವ ಲಿಂ, ಶ್ರೀ ವೀರ ಗಂಗಾಧರ ಶಿವಾಚಾರ್ಯ ಭಗವದ್ಪಾದರ ಆಶೀರ್ವಾದವೇ ಆಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಂದೇಶ ನೀಡಿದ್ದಾರೆ ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಸಮೀಪದ ಭೂಕೈಲಾಸ ಲಿಂ, ರಂಭಾಪುರಿ ಶ್ರೀ ವೀರ ಗಂಗಾಧರ ಸ್ವಾಮಿಗಳು ನಡೆದಾಡಿರುವ ಪುಣ್ಯಭೂಮಿ ಮುಕ್ತಿಮಂದಿರ ಧರ್ಮ ಕ್ಷೇತ್ರ ಈ ಒಂದು ಪುಣ್ಯಕ್ಷೇತ್ರ ವೀರಗಂಗಾಧರ ಸ್ವಾಮಿಗಳ ಈ ಪುಣ್ಯಭೂಮಿಗೆ ಯಾರು ಅಪಾರ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೋ ಅವರ ಕಷ್ಟ ಕಾರ್ಪಣಯಗಳು ದೂರವಾಗಿ ಅವರಿಗೆ ಸುಖ ಶಾಂತಿ ನೆಮ್ಮದಿ ಲಭಿಸುವುದು ನಿಶ್ಚಿತ ಇಂಥ ಒಂದು ಪುಣ್ಯಕ್ಷೇತ್ರದ ಬಗ್ಗೆ ಅಪಾರವಾದ ನಂಬಿಕೆ ಇಟ್ಟಿದ್ದ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಳೆದ ಒಂದು ತಿಂಗಳ ಹಿಂದೆ ಆಗಮಿಸಿ.
ಮುಕ್ತಿ ಮಂದಿರ ಧರ್ಮ ಕ್ಷೇತ್ರಕ್ಕೆ ಆಗಮಿಸಿ ಮಹಾ ತಪಸ್ವಿ ಲಿಂ, ಶ್ರೀ ವೀರ ಗಂಗಾಧರ ಮಹಾಸ್ವಾಮಿಗಳ ಕರ್ತೃ ಗದ್ದಿಗೆ ಎರಡು ಗಂಟೆಗಳ ಕಾಲ ವಿಶೇಷ ಅಭಿಷೇಕ ಮಹಾಪೂಜೆ ನೆರವೇರಿಸಿ ಆಶೀರ್ವಾದ ಪಡೆದು ಒಂದು ತಿಂಗಳು ಗತಿಸುವುದರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಿರುವುದು ಅವರು ಲಿಂ ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಮೇಲೆ ಇಟ್ಟಿರುವ ಅಪಾರ ನಂಬಿಕೆ ಮತ್ತು ಲಿಂ ಶ್ರೀ ವೀರಗಂಗಾಧರ ಶಿವಾಚಾರ್ಯ ಭಗತ್ಪಾದರ ಸಂಕಲ್ಪದಂತೆ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅವರು ನೀಡುತ್ತಿರುವ ಸಹಕಾರ ದೊಡ್ಡದು ಇವರ ಈ ಸಹಾಯ ಸಹಕಾರ ಇದೇ ರೀತಿ ನಿರಂತರವಾಗಿ ಮುಂದು ವರೆಯಲಿ ಅವರು ಇನ್ನೂ ರಾಜಕೀಯ ರಂಗದಲ್ಲಿ ಹೆಚ್ಚಿನ ಹುದ್ದೆಗಳನ್ನು ಅಲಂಕರಿಸಲಿ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾ ಸ್ವಾಮಿಗಳು ತಮ್ಮ ಸಂದೇಶವನ್ನು ನೀಡಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 