ಬೆಲ್ಲದ ಬಾಗೇವಾಡಿಯ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ್ : ಮುನ್ನೆಚ್ಚರಿಕೆಯಿಂದ ಬಚಾವಾದ ಜೀವ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಬೆಲ್ಲದ ಬಾಗೇವಾಡಿಯ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ್ : ಮುನ್ನೆಚ್ಚರಿಕೆಯಿಂದ ಬಚಾವಾದ ಜೀವ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಬೆಳಗಾವಿ : ಅಂಗಡಿಯೊಂದರ ಸ್ನಾನಗೃಹದಲ್ಲಿ ಅಳವಡಿಸಲಾಗಿದ್ದ ಗೇಜರ್ ನ ಸಿಲಿಂಡರ್ ಸ್ಪೋಟ್ ಗೊಂಡು ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹಾನಿ ಸಂಭವಿಸಿದ್ದು, ಮುನ್ನೆಚ್ಚರಿಕೆ ಹಿನ್ನೆಲೆ ಅಂಗಡಿಕಾರರ ಜೀವ ರಕ್ಷಣೆಯಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. 


    ಬೆಲ್ಲದ ಬಾಗೇವಾಡಿಯ ದುಂಡಪ್ಪಾ ಖಾನಾಪೂರ ಎಂಬುರಿಗೆ ಸೇರಿದ್ದ ಅಂಗಡಿ ಇದಾಗಿದೆ. ಇವರು ಶನಿವಾರ ಬೆಳಿಗ್ಗೆ ಎಂದಿನಂತೆ ತಮ್ಮ ಕಿರಾಣಿ ಅಂಗಡಿಯಲ್ಲಿ ‌ಇರುವ ಸ್ನಾನಗೃಹದಲ್ಲಿ ಗೇಜರ್ ಹಚ್ವಿದ್ದಾರೆ. ಅದರಲ್ಲಿನ ಪೈಪ್ ಕಟ್ಟಾಗಿ ಸಿಲಿಂಡರ್ ಸೋರಿಕೆಯಿಂದ ಹೊಗೆ ಬರಲು ಪ್ರಾರಂಭಿಸಿದಾಗ ಅಂಗಡಿಕಾರರು ಅಂಗಡಿಯಿಂದ ಹೊರ ಓಡಿ ಬಂದಿದ್ದಾರೆ. 

   ಬಳಿಕ ಸಿಲಿಂಡರ್ ಸೋರಿಕೆ ಹೆಚ್ಚಾಗಿ ಸಿಲಿಂಡರ್ ಸ್ಪೋಟ್ ಗೊಂಡಿದೆ. ಅಂಗಡಿಕಾರರ ಮುನ್ನೆಚ್ಚರಿಕೆಯಿಂದ ಜೀವಗಳು ಅಂತು ಬಚಾವ್ ಆಗಿವೆ. ಈ ಘಟನೆಯಲ್ಲಿ ಯಾವ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಿರಾಣಿ ಅಂಗಡಿಯಲ್ಲಿ ಇದ್ದ ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಸಿಪಿಐ ರಫೀಕ್ ತಹಶಿಲ್ದಾರರ ಹಾಗೂ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಅಗ್ನಿ ಹತೋಟಿಗೆ ತಂದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸುದ್ದಿ ಓದಿ