ಅಂತರರಾಷ್ಟ್ರೀಯ

ಹಿಂಸಾಚಾರ ತಡೆಗೆ ಅಫಘಾನ್ ರಾಜಧಾನಿಯಲ್ಲಿ ಕರ್ಫ್ಯೂ ಜಾರಿ

ಹಿಂಸಾಚಾರ ತಡೆಗೆ ಅಫಘಾನ್ ರಾಜಧಾನಿಯಲ್ಲಿ  ಕರ್ಫ್ಯೂ ಜಾರಿ

ಮಾಸ್ಕೋ, ಆಗಸ್ಟ್ 16: ಕಾಬೂಲ್ ಹೊರವಲಯದಲ್ಲಿ ನಡೆದ ಘರ್ಷಣೆಯಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು , ತಾಲಿಬಾನ್ ಪಡೆ ನಗರ ಪ್ರವೇಶಿಸಿದೆ ಎಂದು ಇಟಾಲಿಯನ್ ಎನ್‌ಜಿಒ ಸಂಸ್ಥೆ  ವರದಿ ಮಾಡಿದೆ. 

ಇದರ ಜೊತೆಗೆ, ಹಿಂಸಾಚಾರ ತಡೆಗಟ್ಟಲು ಸರ್ಕಾರ ಅಫಘಾನ್ ರಾಜಧಾನಿಯಲ್ಲಿ  ಕರ್ಫ್ಯೂ ವಿಧಿಸಿದೆ ಎಂದುಆಂತರಿಕ ಸಚಿವಾಲಯವನ್ನುಉಲ್ಲೇಖಿಸಿ.ಮಾಧ್ಯಮ ವರದಿ ಮಾಡಿದೆ.ಗಾಯಗೊಂಡ ಹೆಚ್ಚಿನವರು ಕಾರಾಬಾಗ್ ಪ್ರದೇಶದಲ್ಲಿನ  ಹೋರಾಟದಿಂದ ಬಂದದಿದ್ದು ಇವರ ಪೈಕಿ . 22 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಹೆಚ್ಚಿನ  ಸಾವು-ನೋವುಗಳು  ವರದಿಯಾಗಿದೆ ಎಂದು  ಎನ್ಜಿಒ  ಟ್ವಿಟರ್ ಪುಟದಲ್ಲಿ ದಾಖಲು ಮಾಡಿದೆ.  ಗಾಯಗೊಂಡವರ ಸಂಖ್ಯೆ 80 ಕ್ಕೆ ಏರಿಕೆಯಾಗಿದ್ದು  ಆಸ್ಪತ್ರೆ ತುಂಬಿದೆ, ನಾವು ಇನ್ನೂ 13 ಹಾಸಿಗೆಗಳನ್ನು ಹೆಚ್ಚಾಗಿ ಸೇರಿಸಿದ್ದು, ತುರ್ತು ಜೀವ ಉಳಿಸಲು  , ಹಾಗೂ  ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಪ್ರವೇಶ ಮಾನದಂಡಗಳನ್ನು ಸಹ ನಿಗದಿಪಡಿಸಿರುವುದಾಗಿ  ಎನ್‌ಜಿಒ ಟ್ವೀಟ್ ಮಾಡಿದೆ. 

ಸುದ್ದಿ ಓದಿ