ಮಹಾಕುಂಭ ಮೇಳದಿಂದ ಕಾಶಿಗೆ ತೆರಳುತ್ತಿದ್ದ ಕ್ರೂಸರ್ ಅಪಘಾತ: ಮೂವರ ಸಾವು
Cruiser going from Mahakumbha Mela to Kashi mishap: Three killed
ಬೀದರ್ 21: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಕಾಶಿಗೆ ತೆರಳುತ್ತಿದ್ದ ಬೀದರ್ ನ ನಿವಾಸಿಗಳಿದ್ದ ಕ್ರೂಸರ್ ಅಪಘಾತವಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಉತ್ತರ ಪ್ರದೇಶದ ಕಾಶಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಬೀದರ್ ನ ಮೂರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ಮತ್ತು ಗಾಯಾಳುಗಳು ಬೀದರ್ ನ ಲಾಡಗೇರಿಯ ನಿವಾಸಿಗಳು ಎಂದು ತಿಳಿದು ಬಂದಿದೆ.
ನಗರದ ಲಾಡಗೇರಿ ನಿವಾಸಿಗಳಾದ ಲಕ್ಷ್ಮಿ (57), ನೀಲಮ್ಮಾ (62), ಸಂತೋಷಕುಮಾರ (45), ಸುನೀತಾ (40), ಕಲಾವತಿ ಹ (40) ಮೃತಪಟ್ಟವರು.
ಸುಲೋಚನಾ, ಸುಜಾತ, ಕವಿತಾ, ಅನಿತಾ, ಖುಷಿ, ಗಣೇಶ, ಸಾಯಿ, ಭಗವಂತ ಹಾಗೂ ಶಿವಾ ಗಾಯಗೊಂಡವರು.
ವಾರಾಣಸಿಯ ರೂಪಾಪೂರ ಬಳಿ ಶುಕ್ರವಾರ ನಸುಕಿನ ಜಾವ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕುಂಭಮೇಳದ ಭಕ್ತರಿದ್ದ ಕ್ರೂಸರ್ ಡಿಕ್ಕಿ ಹೊಡೆದಿದ್ದು, ವಾಹನ ನುಜ್ಜುಗುಜ್ಜಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 