ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ
Creative program at the Knowledge Center
ಯರಗಟ್ಟಿ 20 : ಸಮೀಪದ ರೈನಾಪೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೃಜನಾತ್ಮಕ ಕಾರ್ಯಕ್ರಮವು ರೈನಾಪೂರ ಕಾರ್ಯಕ್ಷೇತ್ರದ ವಾತ್ಸಲ್ಯ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯೋಜನಾಧಿಕಾರಿ ನಿರ್ದೇಶಕರಾದ ಎಚ್. ಆರ್. ರವಿಕುಮಾರ ಮಾತನಾಡಿದ ನಮ್ಮ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಒಂದು ತಿಂಗಳ ಕಾಲ ಸೃಜನಶೀಲ ಕಾರ್ಯಕ್ರಮದ ಅಡಿಯಲ್ಲಿ ವೈಯರ ಬಾಸ್ಕೇಟ್, ಉಲ್ಲನನಿಂದ ತೋರಣ ಹಾಗೂ ವಿವಿಧ ಕೌಶಲಗಳ ತರಬೇತಿ ನೀಡಲಾಯಿತು ಎಂದು ಹೇಳಿದರು.
ಶ್ರದ್ದಾನಂದ ಆಶ್ರಮದ ಮಾತೋಶ್ರೀ ಉದ್ದಮ್ಮತಾಯಿ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳೆಯರ ಸ್ವಾವಲಂಬನೆ ಮತ್ತು ಸಮುದಾಯದ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಈ ವೇಳೆ ಜೆ. ರತ್ನಾಕರ ಶೆಟ್ಟಿ, ತಾಲೂಕಾ ಯೋಜನಾಧಿಕಾರಿ ಶ್ರೀಕಾಂತ ಎಮ್. ರೈತ ಮುಖಂಡ ವೆಂಕಣ್ಣಾ ಹುರಕನವರ, ಸುವರ್ಣಾ ಹಿರೇಮಠ, ಮಂಜುಳಾ ಕುಂಬಾರಗೇರಿಮಠ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿಶಾ ಮೋಹನ ನಾಯ್ಕ, ಸೇವಾ ಪ್ರತಿನಿಧಿ ಗೀತಾ ಹುಟ್ಟಿ ಸೇರಿದಂತೆ ಅನೇಕರು ಮಹಿಳೆಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 