ಕೊರೋನಾ: ಮುನ್ನೆಚ್ಚರಿಕೆ ವಹಿಸಲು ಬಾಲದಂಡಿ ಕರೆ
ಮೂಡಲಗಿ 31: ಕೊರೋನಾ ರೂಪಾಂತರಿ ಎರಡನೇ ಅಲೆಯು ವೇಗವಾಗಿ ಹರಡುತ್ತಿದ್ದು ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನೀವು ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತ ಮುತ್ತಲಿನ ಸಾರ್ವಜನಿಕರನ್ನು ರಕ್ಷಿಸಿ ಎಂದು ಮೂಡಲಗಿ ಠಾಣೆಯ ಪಿಎಸ್ಐ ಎಚ್ ವೈ ಬಾಲದಂಡಿ ಹೇಳಿದರು.
ಮಂಗಳವಾರದಂದು ಪಟ್ಟಣದ ಕಲ್ಮೇಶ್ವರ ಸರ್ಕಲ್ ಬಳಿ ಹಾಗೂ ವಿವಿದೆಡೆ ಸಂಚರಿಸಿ ಕೊರೋನಾ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಮಾತನಾಡಿ, ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹಾಗೂ ಜಾತ್ರೆ, ಸಂತೆ, ಸಭೆ ಸಮಾರಂಭಗಳಿಂದ ದೂರವಿದ್ದು ಅನಗತ್ಯವಾಗಿ ನೆರೆಯ ಮಹಾರಾಷ್ಡ್ರಕ್ಕೆ ಹೋಗದೆ ಸೋಂಕು ಹರಡವಿಕೆಯನ್ನು ತಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.