ಅಂತರರಾಷ್ಟ್ರೀಯ

ಕೋವಿಡ್‌ ನಾಲ್ಕನೇ ಅಲೆ; ಫ್ರಾನ್ಸ್‌ ನಲ್ಲಿ ಕಠಿಣ ನಿರ್ಬಂಧಗಳು

ಕೋವಿಡ್‌  ನಾಲ್ಕನೇ ಅಲೆ;  ಫ್ರಾನ್ಸ್‌ ನಲ್ಲಿ  ಕಠಿಣ  ನಿರ್ಬಂಧಗಳು

ಪ್ಯಾರಿಸ್,  ಜುಲೈ 22 : ಪ್ರಪಂಚದ  ದೇಶಗಳನನ್ನು ಕೊರೊನಾ  ಸಾಂಕ್ರಾಮಿಕ   ಕಳೆದ  ಒಂದೂವರೆ  ವರ್ಷದಿಂದ   ಇನ್ನಿಲ್ಲದಂತೆ  ಕಾಡುತ್ತಿದೆ.  ಈಗಾಗಲೇ  ಹಲವಾರು   ದೇಶಗಳು ಎರಡನೇ,  ಮೂರನೇ ಅಲೆಗೆ ಒಳಗಾಗಿ  ಚೇತರಿಸಿಕೊಳ್ಳುತ್ತಿವೆ.  ಆದರೆ,  ವೈರಾಣು  ಪ್ರಸರಣ  ಮಾತ್ರ   ಇನ್ನೂ ಸಂಪೂರ್ಣವಾಗಿ ತಗ್ಗಿಲ್ಲ.   ಈಗ  ಫ್ರಾನ್ಸ್‌ ನಲ್ಲಿ    ವೈರಸ್‌   ನಾಲ್ಕನೇ  ಹಂತ   ಆರಂಭವಾಗಿದೆ    ಎಂದು    ಅಲ್ಲಿನ    ಸರ್ಕಾರದ  ವಕ್ತಾರ ಗೇಬ್ರಿಯಲ್ ಅಟ್ಲ್ ಹೇಳಿದ್ದಾರೆ.

ಸಾಂಕ್ರಾಮಿಕ  ಮಿಂಚಿನ ವೇಗದಲ್ಲಿ ಹರಡಬಹುದು ಎಂಬ ಕಳವಳ ವ್ಯಕ್ತಪಡಿಸಿರುವ ಅವರು  ಹಾಗಾಗಿ  ದೇಶದಲ್ಲಿ  ಮತ್ತೊಮ್ಮೆ    ಕಠಿಣ  ನಿರ್ಬಂಧ  ವಿಧಿಸುವುದಾಗಿ  ಮತ್ತೊಮ್ಮೆ ಘೋಷಿಸಿದ್ದಾರೆ.

ಫ್ರಾನ್ಸ್‌ನ ಸಾಂಸ್ಕೃತಿಕ ಸ್ಥಳಗಳು, ಉದ್ಯಾನ ವನಗಳು. ಈಜುಕೊಳಗಳಿಗೆ ಭೇಟಿ  ನೀಡಬೇಕಾದರೆ  ಕೋವಿಡ್‌  ಲಸಿಕೆ  ಹಾಕಿಸಿಕೊಂಡ  ಪ್ರಮಾಣಪತ್ರ  ಕಡ್ಡಾಯ  ಎಂದು ಹೇಳಿದ್ದಾರೆ.  ಜೊತೆಗೆ ಕೊರೊನಾ  ನೆಗೆಟಿವ್‌   ವರದಿಯನ್ನು   ಸಹ  ತೋರಿಸಬೇಕು  ಎಂದು ಅಟ್ಲ್‌   ಹೇಳಿದ್ದಾರೆ.   ಎಲ್ಲ  ಜನರೂ  ಲಸಿಕೆ ಹಾಕಿಸಿಕೊಳ್ಳುವಂತೆ  ಸೂಚಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದ್ದಾರೆ.  ಆಗಸ್ಟ್ ಆರಂಭದಿಂದಲೇ   ರೆಸ್ಟೋರೆಂಟ್‌,  ಬಾರ್‌   ಪ್ರವೇಶಿಸಲು, ರೈಲುಗಳಲ್ಲಿ  ಪ್ರಯಾಣಿಸಲು  ಹೆಲ್ತ್‌ಪಾಸ್ ಕಡ್ಡಾಯಗೊಳಿಸಲಾಗಿದೆ.  ಲಸಿಕೆ ಹಾಕಿಸಿಕೊಂಡವರಿಗೆ  ಮಾತ್ರ  ಹೆಲ್ತ್‌   ಪಾಸ್ ನೀಡಲಾಗುವುದು ಎಂದು ಪ್ರಧಾನಿ ಜೀನ್ ಕೋಸ್ಟೆಕ್ಸ್ ಹೇಳಿದ್ದಾರೆ.

ಅಲ್ಲದೆ,   ವ್ಯಾಕ್ಸಿನೇಷನ್   ಪ್ರಕ್ರಿಯೆಯ  ವೇಗ  ಹೆಚ್ಚಿಸಿ,  ಎರಡು ವಾರಗಳಲ್ಲಿ ಐದು ಮಿಲಿಯನ್ ಲಸಿಕೆ   ಲಭ್ಯವಾಗಿಸುವಂತೆ  ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅದೇ ರೀತಿ, ಹೆಲ್ತ್‌ಪಾಸ್ ನಿಯಮ  ಉಲ್ಲಂಘಿಸಿದರೆ ದಂಡ  ಹಾಗೂ  ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜೀನ್ ಕೋಸ್ಟೆಕ್ಸ್ ಎಚ್ಚರಿಸಿದ್ದಾರೆ. ಮಂಗಳವಾರದ ಹೊತ್ತಿಗೆ, ಫ್ರಾನ್ಸ್‌ನಲ್ಲಿ 18,000  ಸಕ್ರಿಯ  ಪ್ರಕರಣಗಳು  ದಾಖಲಾಗಿವೆ.


ಸುದ್ದಿ ಓದಿ