ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ ಹೊಸ ಪ್ರಕರಣದಿಂದ 874 ಸಾವು

ಬ್ರೆಜಿಲ್ ನಲ್ಲಿ  ಹೊಸ ಪ್ರಕರಣದಿಂದ 874 ಸಾವು

ಬ್ರೆಸಿಲಿಯಾ, ಮೇ 31: ಬ್ರೆಜಿಲ್ ನಲ್ಲಿ  ಕಳೆದ  24 ಗಂಟೆಗಳ ಅವಧಿಯಲ್ಲಿ  ಹೊಸದಾಗಿ    874ಕ್ಕೂ  ಹೆಚ್ಚು ಸಾವು ವರದಿಯಾಗಿದೆ. 

ಇದರ ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 461,931 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ಒಟ್ಟು 43,520 ಸೋಂಕುಗಳು ಪ್ರಕರಣಗಳುಪತ್ತೆಯಾಗಿದ್ದು, ರಾಷ್ಟ್ರವ್ಯಾಪಿ ಸಂಖ್ಯೆ 16,515,120 ಕ್ಕೆ ಏರಿಕೆಯಾಗಿದೆ. ಅಮೆರಿಕದ ನಂತರ ಬ್ರೆಜಿಲ್ ನಲ್ಲಿ ಹೆಚ್ಚು ಸೋಂಕು  ಹಾಗೂ ಸಾವಿನ ಪ್ರಕರಣ ದಾಖಲಾಗಿದೆ. 

ಈವರೆಗೆ ದೇಶದಲ್ಲಿ  67 ದಶಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ಮೊದಲ  ಲಸಿಕೆ ಪಡೆದಿದ್ದರೆ,   22 ದಶಲಕ್ಷ ಜನರು ಎರಡನೇ  ಡೋಸ್ ಲಸಿಕೆ  ಪಡೆದಿದ್ದಾರೆ ಎಂದೂ ಸಚಿವಾಲಯದ ವರದಿ ಹೇಳಿದೆ. 

ಸುದ್ದಿ ಓದಿ