ಅಂತರರಾಷ್ಟ್ರೀಯ

ಕರೋನ: ನೇಪಾಳದಲ್ಲಿ ಒಂದೇ ದಿನ 35 ಸಾವು

ಕರೋನ: ನೇಪಾಳದಲ್ಲಿ ಒಂದೇ ದಿನ 35 ಸಾವು

ಕಠ್ಮಂಡು, ಎಪ್ರಿಲ್ 30: ಹಿಮಾಲಯ ದೇಶ ನೇಪಾಳದಲ್ಲಿ ಕರೋನ ಸೋಂಕಿಗೆ ಒಂದೇ   ದಿನದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ ಎಂದು ವರದಿಯಾಗಿದೆ. 

ಕಳೆದ 24 ಗಂಟೆಗಳಲ್ಲಿ ಒಟ್ಟು ಕರೋನ ಸೋಂಕಿಗೆ ದೇಶದಲ್ಲಿ 35 ಜನರು  ಸಾವನ್ನಪ್ಪಿದ್ದಾರೆ ಎಂದು ನೇಪಾಳದ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ವರದಿ ಮಾಡಿದೆ.  ಕಳೆದ ವರ್ಷದ ಆರಂಭದಲ್ಲಿ ನೇಪಾಳಕ್ಕೆ ಸಾಂಕ್ರಾಮಿಕ ರೋಗ ಬಡಿದ ನಂತರ ಒಂದೇ ದಿನದಲ್ಲಿ ಸಾಂಕ್ರಾಮಿಕ ರೋಗಕ್ಕೆ  ಅದೂ ಒಂದೆ ದಿನ ಅತಿ ಹೆಚ್ಚು ಸಾವು ಸಂಭವಿಸಿದೆ. 

ಕಳೆದ ವರ್ಷ ನವೆಂಬರ್ 4 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಆಗ   30 ಸಾವಿನ ಪ್ರಕರಣಗಳು  ವರದಿಯಾಗಿತ್ತು 

ಗುರುವಾರದ ವೇಳೆಗೆ ನೇಪಾಳದಲ್ಲಿ ಮಾರಕ ಸೋಂಕಿನಿಂದ ಮೃತಪಟ್ಟವರ ಸಾವಿನ ಸಂಖ್ಯೆ   3,246 ಕ್ಕೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕರೋನ ಸೋಂಕಿನ ಪರಿಣಾಮವಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಸಚಿವಾಲಯ ವರದಿ ತಿಳಿಸಿದೆ.

ಸುದ್ದಿ ಓದಿ