ಕಂಟ್ರಿ ಬಂದೂಕು ತಯಾರಿಕೆ : 9 ಪಿಸ್ತೂಲ್ ವಶ : 13 ಜನ ಬಂಧನ
Country Firearm Manufacture: 9 Pistols Seized: 13 Arrested
ಲೋಕದರ್ಶನ ವರದಿ
ಬೆಳಗಾವಿ 30: ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಖದೀಮರನ್ನು ಬಂಧಿಸಿರುವ ಜಿಲ್ಲೆಯ ಖಾನಾಪುರ ಪೊಲೀಸರು ಬಂಧಿತರಿಂದ 9 ಪಿಸ್ತೂಲ್ ಹಾಗೂ ಮದ್ದು ಗುಂಡುಗಳು, ತಯಾರಿಕೆಗೆ ಉಪಯೋಗಿಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್ ಇಂದಿಲ್ಲಿ ತಿಳಿಸಿದರು. ಶನಿವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪೂರ ತಾಲೂಕಿನ ಕಾಟಗಾಳಿ ಗ್ರಾಮದಲ್ಲಿ 9 ಕಂಟ್ರಿ ಬಂದೂಕುಗಳ ಜಪ್ತಿ ಮಾಡಲಾಗಿದೆ. ಬಂದೂಕು ತಯಾರಿಸುತ್ತಿದ್ದವ, ಬಂದೂಕು ಖರೀದಿಸಿದವರು, ಆಕ್ರಮವಾಗಿ ಮದ್ದುಗುಂಡುಗಳನ್ನು ಮಾರಾಟ ಮಾಡಿದವರು ಮತ್ತು ಬಂದೂಕಿನ ಬ್ಯಾರೆಲಗಳನ್ನು ವೆಲ್ಡಿಂಗ್ ಮಾಡಿಕೊಡುತ್ತಿದ್ದವನು ಸೇರಿ 13 ಜನರಿಗೆ ಬಂಧನ ಮಾಡಲಾಗಿದೆ. ಆರೋಪಿ ಮಾರುತಿ ಶ್ರೀಕಾಂತ್ ಸುತಾರ, (ಸಾ: ಕಾಟಗಾಳಿ, ತಾ: ಖಾನಾಪೂರ) ಇವನು ಕಾಟಗಾಳಿ ಗ್ರಾಮದ ತನ್ನ ಮನೆಯಲ್ಲಿ ಆಕ್ರಮವಾಗಿ 2024ರಿಂದ ಈವರೆಗೆ ಕಂಟ್ರಿ ಬಂದೂಕುಗಳನ್ನು (ಅಠಟಿಣಡಿಥಿ-ಟಚಿಜಜ ರಣಠಿ) ತಯಾರಿಸಿ, ಜನರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಸಂಗ್ರಹಿಸಿ ಪೊಲೀಸರು ದಾಳಿ ಮಾಡಿದ್ದಾರೆ.
ಸಿದ್ರಾಮ ಅಜ್ಜಪ್ಪ ಹಸರೆ, ಸಿಪಿಸಿ ಬ.ನಂ: 4003 ಖಾನಾಪೂರ ಪೊಲೀಸ್ ಠಾಣೆ ಇವರು ದಿ. 11-05-2026ರಂದು ನೀಡಿದ ದೂರಿನ ಮೇರೆಗೆ ಖಾನಾಪೂರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 139/2026 ಕಲಂ: 05, 25 ್ಲ1ಎಎ್ವ, 27, 29, 30 ಭಾರತೀಯ ಆಯುಧ ಕಾಯ್ದೆ: 1959 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರೋಪಿ ಮಾರುತಿ ಶ್ರೀಕಾಂತ್ ಸುತಾರ ಈತನಿಗೆ ದಿ: 11-05-2026ರಂದು ಬಂಧಿಸಿ ಆತನಿಂದ ತಯಾರಿ ಸ್ಥಿತಿಯಲ್ಲಿದ್ದ ಒಂದು ಕಂಟ್ರಿ ಬಂದೂಕು ಹಾಗೂ ಈ ಆರೋಪಿತನಿಂದ ಕಂಟ್ರಿ ಬಂದೂಕುಗಳನ್ನು ಖರೀದಿಸಿದ ಕಾಟಗಾಳಿ ಗ್ರಾಮದ ಸೋಮನಾಥ ಪಲ್ಲಾದ ಚೌಗುಲೆ, ಸಂತೋಷ ಶಿವಾಜಿ ನಾಯಕ, ಮಾರುತಿ ಯಲ್ಲಪ್ಪ ಗುಡದ್ಯಾಗೋಳ, ಬಾಳು ಭರಮಾಣಿ ನಾಯಕ ಮತ್ತು ಲಕ್ಷ್ಮಣ ಬಾಲಪ್ಪ ಗುಜನಾಳ, (ಸಾ: ಮಾರ್ಕಂಡೆಯ ನಗರ, ತಾ: ಜಿ ಬೆಳಗಾವಿ), ಬಸವರಾಜ ಗಂಗಪ್ಪ ಸಾಲೋಟಗಿ, ಬಸವಂತ ಭರಮಾಣಿ ಯರಮಾಳಕರ, ಲಕ್ಷ್ಮಣ ಈಶ್ವರ ಗುರವ, (ಸಾ: ಮೂವರು ಮೋದೆಕೊಪ್ಪ) ಇವರಿಗೆ ದಿ. 11-05-226ರಂದು ಬಂಧಿಸಿ ಇವರ ಕಡೆಯಿಂದ ತಲಾ ಒಂದರಂತೆ 8 ಕಂಟ್ರಿ ಬಂದೂಕುಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ ಎಂದರು.
ಅಲ್ಲದೇ ಆರೋಪಿ ಮಾರುತಿ ಸುತಾರ ಇವನ ಕಡೆಗೆ ಕಂಟ್ರಿ ಬಂದೂಕು ಮಾಡಲು ಹಣ ಕೊಟ್ಟಿದ್ದ ಆರೋಪಿ ಮರಿಯಪ್ಪ ನಿಂಗಪ್ಪ ನಾಯಕ, (ಸಾ: ಕಾಳೇನಟ್ಟಿ, ತಾ: ಜಿ ಬೆಳಗಾವಿ) ಇವನಿಗೆ ಸಹಾ ಬಂಧನ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿರುವ ತನ್ನ ಬುಕ್ ಸ್ಟಾಲದಲ್ಲಿ ಬಂದೂಕಿನ ಬಿಡಿಭಾಗಗಳು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಅವುಗಳನ್ನು ಆರೋಪಿ ಮಾರುತಿ ಸುತಾರ ಇವನಿಗೆ ಮಾರಾಟ ಮಾಡಿದ ಆರೋಪಿ ವಿಶ್ವನಾಥ ಅ ಸಂತೋಷ ಸೀತಾರಾಮ ದೇಸಾಯಿ, (ಸಾ: ರಾಮನಗರ, ತಾ: ಜೊಯಿಡಾ) ಇವನನ್ನು ಕೂಡಾ ಬಂಧಿಸಿದ್ದು, ಈತನಿಂದ ಬಂದೂಕಿನ 21-ಗರ್ಗಳು, 05- ಗಡ್ಡಾ ್ಲಹೆಡ್ವ್ಗಳು, 15-ನಿಪ್ಪಲ್ಗಳು, ಒಂದು ಸಿಲಿಂಗ್ ಬೆಲ್ಟ್ ಹಾಗೂ 34 ಮದ್ದು ತುಂಬಿದ ಪ್ಯಾಕೇಟಗಳು, 449 ಚೇರೆ (ಸೀಸಿನ ಗೋಲಗಳು) ಗಳು, 420 ಕೇಪ್ಗಳು, 48 ಜೀವಂತ ಕಾಡತೂಸುಗಳನ್ನು ಜಪ್ತ ಮಾಡಲಾಗಿದೆ ಎಂದು ತಿಳಿಸಿದರು. ಬೆಳಗಾವಿಯ ಖಂಜರ ಗಲ್ಲಿಯಲ್ಲಿರುವ ತನ್ನ ಅವೀಜ್ ಗನ್ ಶಾಪ್ ಪರವಾನಗಿ ಪತ್ರದ ಅವಧಿ 2021ರಲ್ಲಿ ಮುಗಿದಿದ್ದರೂ ತನ್ನ ಅಂಗಡಿಯಲ್ಲಿ ಬಾಕಿ ಉಳಿದ ಮದ್ದುಗುಂಡುಗಳು ಹಾಗೂ ಬಂದೂಕಿನ ಬಿಡಿಭಾಗಗಳನ್ನು ಆರೋಪಿ ವಿಶ್ವನಾಥ ಅ ಸಂತೋಷ ಸೀತಾರಾಮ ದೇಸಾಯಿ ಇವನಿಗೆ ಅನಧಿಕೃತವಾಗಿ ಮಾರಾಟ ಮಾಡಿದ ಬೆಳಗಾವಿಯ ಗೊಂದಳಿ ಗಲ್ಲಿಯ ನಿವಾಸಿ ವಿಜಯ ಅಪ್ಪಾಜಿ ಅಂಗೋಳಕರ ಈತನಿಗೆ ಬಂಧಿಸಲಾಗಿದೆ.
ಬೆಳಗಾವಿ ತಾಲೂಕಿನ ದೇಸೂರ ಗ್ರಾಮ ಹದ್ದಿಯಲ್ಲಿ ಪಣಜಿ-ಬೆಳಗಾವಿ ಹೆದ್ದಾರಿ ಪಕ್ಕದಲ್ಲಿರುವ ತನ್ನ ವೆಲ್ಡಿಂಗ್ ಅಂಗಡಿಯಲ್ಲಿ ಆರೋಪಿ ಮಾರುತಿ ಸುತಾರ ಇವನು ತಯಾರಿಸುತ್ತಿದ್ದ ಕಂಟ್ರಿ ಬಂದೂಕುಗಳ ಬ್ಯಾರೆಲಗಳಗೆ ವೆಲ್ಡಿಂಗ್ ಮಾಡಿಕೊಡುತ್ತಿದ್ದ ಆರೋಪಿ ಮಹೇಶ ಮಾರುತಿ ಲಕ್ಕೇಬೈಲಕರ, (ಸಾ: ದೇಸೂರ, ತಾ:ಜಿ ಬೆಳಗಾವಿ) ಇವನಿಗೆ ಬಂಧಿಸಿ ವೆಲ್ಡಿಂಗ್ ಮಶೀನ್ ಜಪ್ತ ಮಾಡಲಾಗಿದೆ. ಎಲ್ಲ ಆರೋಪಿತರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಎಸ್ಪಿ ತಿಳಿಸಿದರು. ನನ್ನ ಹಾಗೂ ಹೆಚ್ಚುವರಿ ಎಸ್.ಪಿ ಬಸರಗಿ ಇವರ ಮಾರ್ಗದರ್ಶನ ಮತ್ತು ಡಿ.ಎಸ್.ಪಿ ಬೈಲಹೊಂಗಲ ಇವರ ನೇತೃತ್ವದಲ್ಲಿ ಎಲ್.ಎಚ್ ಗೌಂಡಿ, ಪಿ.ಐ ಖಾನಾಪೂರ, ಇವರು ಠಾಣಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ತನಿಖೆ ಕೈಕೊಂಡು ಆರೋಪಿತರಿಗೆ ಹಾಗೂ ಕಂಟ್ರಿ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಎಂದು ಎಸ್ ಪಿ ರಾಮರಾಜನ್ ತಿಳಿಸಿದರು.
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ 