ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭ : ದೊಡ್ಡ ಜಿಲ್ಲೆ ಬೆಳಗಾವಿಯಿಂದಲೇ ಚುನಾವಣಾ ರಣಕಹಳೆ ಮೊಳಗಿಸತಾರ ಪ್ರಧಾನಿ
ಪಾರೇಶ ಭೋಸಲೆ
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಹೊತರುಪಡಿಸಿ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ ಹಾಗೂ ಅತಿ ಹೆಚ್ವು ಮತಕ್ಷೇತ್ರಗಳನ್ನ ಹೊಂದಿರುವ ಬೆಳಗಾವಿ ಜಿಲ್ಲೆಯಿಂದ ಪ್ರಧಾನಿ ಮೋದಿ ಅವರು ಚುನಾವಣಾ ರಣಕಹಳೆ ಊದುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನ ದಿನಕ್ಕೆ ಹೆಚ್ವುತ್ತಿದ್ದು, ಇನ್ನು ಚುನಾವಣೆಯ ದಿನಾಂಕ ನಿಗಧಿ ಆಗದಿದ್ದರು ರಾಜಕೀಯ ಪಕ್ಷಗಳು ಇಗಿನಿಂದಲೇ ತಯಾರಿಯಲ್ಲಿ ಇವೆ. ರಾಜ್ಯದ ಚುಕ್ಕಾಣಿ ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳು ರಣತಂತ್ರವನ್ನು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿಗೆ ಮೋದಿ ಆಗಮನದಿಂದ ಬಿಜೆಪಿಯಲ್ಲಿ ಹೊಸ ಉತ್ಸಾಹ ಮೂಡಿದೆ.
ಆದರೆ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಜೊತೆಗೆ ಚುನಾವಣಾ ರಣಕಹಳೆ ಊದು ಸಾಧ್ಯತೆ ಇದ್ದು, ಬೆಳಗಾವಿಯಿಂದಲೇ ಚುನಾವಣೆ ಪ್ರಚಾರ ಆರಂಭವಾಗುವ ಎಲ್ಲ ಮುನ್ಸೂಚನೆಗಳು ಗೋಚತಿಸುತ್ತಿವೆ. ಅಲ್ಲದೆ ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಅತಿ ದೊಡ್ಡ ಜಿಲ್ಲೆ ಹಾಗೂ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಮೇಲೆ ಮೋದಿ ಅವರ ಕಣ್ಣು ಬಿದ್ದಿದೆ ಎನ್ನುವ ಮಾತು ಈಗ ಸಾರ್ವಜನಿಕರಲ್ಲಿ ಚರ್ಚೆಗೆ ಗುರಿಯಾಗಿದೆ.
ಪ್ರಧಾನಿ ಮೋದಿ ಆಗಮನದಿಂದ ಕೇಸರಿಮಯವಾದ ಕುಂದಾನಗರಿ
ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸೋಮವಾರ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕುಂದಾನಗರಿ ಈಗ ಅಕ್ಷರಶಃ ಕೇಸರಿಮಯವಾಗಿ ಪರಿವರ್ತನೆಗೊಂಡಿದೆ. ಅಲ್ಲದೆ ಬೆಳಗಾವಿ ನಗರದ ತುಂಬೇಲ್ಲ ಪೊಲೀಸ ಹದ್ದಿನ ಕಣ್ಣು ಇರಿಸಲಾಗಿದೆ. ಕಟ್ಟೆಚ್ಚರ ವಹಿಸಲಾಗಿದೆ.
ಬೆಳಗಾವಿ ನಗರದಲ್ಲಿ ಸೋಮವಾರ ನಗರದ ಚನ್ನಮ್ಮ ವೃತ್ತಕ್ಕೆ ಬಂದು ಪೂಜೆ ಮೂಲಕ ರೋಡ ಶೋ ಪ್ರಾರಂಭಿಸಿ, ಬಳಿಕ 12 ಕಿಮೀ ವರೆಗೆ ಸಂಚರಿಸಿ ಬಳಿಕ ನಗರದ ಯಡಿಯೂರಪ್ಪ ಮಾರ್ಗದಲ್ಲಿನ ಮಾಲಿನಿ ಸಿಟಿಯಲ್ಲಿ ಸಾರ್ವಜನಿಕವಾಗಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡ-ಮೂರು ದಿನಗಳಿಂದ ಸಾವಿರಾರು ಪೊಲೀಸ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಂತೆ ಬೆಳಗಾವಿ ನಗರ ಪ್ರದೇಶದಲ್ಲಿ ರಸ್ತೆ ಸಂಚಾರವನ್ನು ಬದಲಾಯಿಸುವ ಮೂಲಕ ಯಾವ ತೊಂದರೆ ಆಗದಂತೆ ಕೆಲವು ಪ್ರದೇಶದ ರಸ್ತೆಗಳಿಗೆ ಬ್ಯಾರಿಕೇಟ್‍ಗಳನ್ನು ಪೊಲೀಸರು ಅಳವಡಿಸಿದ್ದಾರೆ.
ಅದರಂತೆ ಕೆಲವು ರಾಜ್ಯಗಳಿಂದ ಹಲವಾರು ಬಗೆಯ ಉಡುಗೆಗಳನ್ನು ತೊಟ್ಟ ಕಲಾವಿದರು ಹಾಗೂ ಸಾಂಸ್ಕøತಿಕ ಕಲಾ ತಂಡದವರು ಪ್ರಧಾನಿ ಮೋದಿ ಅವರನ್ನು ಸ್ವಾಗತ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಬೆಳಗಾವಿ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಪ್ರಧಾನಿ ಮೋದಿ ಅವರು 11 ಕಿಮೀ ರೋಡ ಶೋ ಮಾಡುವ ಮೂಲಕ ದಾಖಲೆ ಬರೆಯಲಿದ್ದಾರೆ.
ಕಲ್ಲಂಗಡಿ ಯಲ್ಲಿ ಅರಳಿದ ಮೋದಿ
ಕಲ್ಲಂಗಡಿ ಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ತಮ್ಮ ಕೈಚಳಕದೊಂದಿಗೆ ಅರಳಿಸಿರುವ ಕಲಾವಿದ ಓರ್ವ ಅದನ್ನು ಪ್ರಧಾನಿ ಮೋದಿ ಅವರ ರೋಡ್ ಶೋದಲ್ಲಿ ಪ್ರದರ್ಶನ ಮಾಡಲು ತಮ್ಮ ಧರ್ಮಪತ್ನಿಯೊಂದಿಗೆ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ್ದಾರೆ.