ಮೂಡಲಗಿ

ನಿಯಮ ಉಲ್ಲಂಘಿಸಿದರೆ ಅಪಾಯ ತಪ್ಪಿದ್ದಲ್ಲ: ಹರ್ದಿ

ನಿಯಮ ಉಲ್ಲಂಘಿಸಿದರೆ ಅಪಾಯ ತಪ್ಪಿದ್ದಲ್ಲ: ಹರ್ದಿ
ಮೂಡಲಗಿ: ಪಟ್ಟಣದ ವಿವಿದೆಡೆ ಪುರಸಭೆ, ಪೋಲಿಸ ಠಾಣೆ, ಪತ್ರಿಕಾ ಬಳಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ

ಮೂಡಲಗಿ 2: ಸಾರ್ವಜನಿಕರ ಬೇಕಾಬಿಟ್ಟಿ ವರ್ತನೆಯಿಂದ ಕೊರೋನಾ ನಿಯಮ ಉಲ್ಲಂಘನೆಯಾಗುತ್ತಿದೆ  ಹಲವಾರು ಬಾರಿ ನಾನಾ ತರಹದ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಅಪಾಯಕ್ಕೆ ಆವ್ಹಾನ ನೀಡಿದಂತಾಗುವುದು. ಇದರ ಕಡಿವಾಣಕ್ಕೆ ಕಠಿಣ ಕ್ರಮದ ಅವಶ್ಯಕತೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ಪುರಸಭೆ ಕಾರ್ಯಾಲಯ, ಪೋಲಿಸ ಠಾಣೆ, ಪತ್ರಕರ್ತರ ಬಳಗ ಹಾಗೂ ಸಮುದಾಯ ಆರೋಗ್ಯಕೇಂದ್ರ ಸಹಯೋಗದೊಂದಿಗೆ ಪುರಸಭೆ ಆವರಣದಲ್ಲಿ ಕೊರೋನಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ಜಾಗೃತರಾಗಬೇಕು. ಕೊರೋನಾ ನಿಯಮ ಪಾಲನೆಯೇ ಸುರಕ್ಷಾ ಮಂತ್ರವಾಗಿದೆ ಜನ ಎಚ್ಚೆತ್ತುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಪಿಐ ಸತೀಶ ಕಣಿಮೇಶ್ವರ ಮಾತನಾಡಿ, ತಾಲೂಕಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸರ್ಕಾರ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಆದ್ದರಿಂದ ಸ್ಯಾನಿಟೈಸರ್, ಮಾಸ್ಕ ಬಳಸುವುದು ಹಾಗೂ ಅನಗತ್ಯವಾಗಿ ಸಾರ್ವಜನಿಕರು ಹೊರಗಡೆ ಹೋಗದೆ ನಿಮ್ಮ ಜೀವನ ಜೊತೆಗೆ ನಿಮ್ಮ ಕುಟುಂಬದ ರಕ್ಷಣೆ ಮಾಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಮೊದಲನೇ ಭಾರಿ ಕೊರೋನಾ ಅಲೆಯಲ್ಲಿ ಮೂಡಲಗಿ ತಾಲೂಕಿನಲ್ಲಿ  ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳು ಕಂಡು ಬಂದಿದೆ ಆದರೆ ಈಗ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರು ಜಾಗೃತರಾಗಬೇಕು. ಹೀಗೆ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.

ಜಾಗೃತಿ ಜಾಥಾ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.

ಸಂದರ್ಭದಲ್ಲಿ ಪಿಎಸ್‍ಐ ಎಚ್.ವೈ. ಬಾಲದಂಡಿ, ವೈದ್ಯಾಧಿಕಾರಿ ಭಾರತಿ ಕೋಣಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮತ್ತು ಪ್ರತಕರ್ತರಾದ ಅಲ್ತಾಫ್ ಹವಾಲ್ದಾರ್, ಕೃಷ್ಣಪ್ಪ ಗಿರೆನ್ನವರ, ಭೀಮಶಿ ತಳವಾರ, ಸುಭಾಷ ಗೋಡ್ಯಾಗೊಳ, ಮಲ್ಲು ಬೋಳನವರ, ಹಣಮಂತ ಕಂಕಣವಾಡಿ, ಲಕ್ಷ್ಮಣ ಮಳ್ಳಿಗೇರಿ ಹಾಗೂ ಶಬ್ಬೀರ್ ಪೈಲ್ವಾನ್ ಮತ್ತು ಆಶಾ ಕಾರ್ಯಕರ್ತೆಯರು, ಪುರಸಭೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಸುದ್ದಿ ಓದಿ