ಮೂಡಲಗಿ

ಡಾ. ಯತೀಶ ಪೂಜಾರ ವಿದ್ಯಾರ್ಥಿಗಳೊಂದಿಗೆ ಸಂವಾದ

ಡಾ. ಯತೀಶ ಪೂಜಾರ ವಿದ್ಯಾರ್ಥಿಗಳೊಂದಿಗೆ ಸಂವಾದ

ಮೂಡಲಗಿ 03: ಇಲ್ಲಿನ ಪ್ರತಿಷ್ಠಿತ ಶ್ರೀನಿವಾಸ ಸ್ಕೂಲ್ ನಲ್ಲಿ ಇಂದು 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ರಬಕವಿಯ ಡಾ. ಯತೀಶ ಪೂಜಾರ ‘ಕೊವಿಡ್ 19 ಪರಿಸ್ಥಿತಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಒತ್ತಡ ಸಹಿಷ್ಣುತೆ’ ಎಂಬ ವಿಷಯದ ಮೇಲೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಘು ಜಕಾತಿ,  ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ಪ್ರಾಚಾರ್ಯ ಮನೋಜ ಭಟ್ಟ ಹಾಗೂ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

ಹದಿಹರೆಯದವರ ಆರೋಗ್ಯ ಅಕಾಡೆಮಿಯ ಸದಸ್ಯರಾದ ಡಾ. ಪೂಜಾರ, ವಿದ್ಯಾರ್ಥಿಗಳಲ್ಲಿ ಆರೋಗ್ಯ, ಶುಚಿತ್ವಪಾಲನೆ, ಉತ್ತಮ ಹವ್ಯಾಸಗಳು ಹಾಗೂ ಅಧ್ಯಯನದ ಮಹತ್ವಗಳನ್ನು ತಿಳಿಹೇಳಿದರು. ವಿದ್ಯಾರ್ಥಿಗಳು ‘ಕೊವಿಡ್ 19’ ಪರಿಸ್ಥಿತಿಯಲ್ಲಿ ಅನುಭವಿಸಿದ ಒತ್ತಡಗಳನ್ನು ಮುಕ್ತವಾಗಿ ವೈದ್ಯರೊಂದಿಗೆ ಹಂಚಿಕೊಂಡು, ಅಗತ್ಯ ಸಲಹೆ ಸೂಚನೆಗಳನ್ನು ಪಡೆದರು. 

ಇದಕ್ಕೂ ಮುಂಚಿತವಾಗಿ ನಡೆಸಲಾಗಿದ್ದ ‘ಕೊವಿಡ್ 19’ ಕುರಿತಾದ ಚಿತ್ರಕಲೆ ಹಾಗೂ ಕವನ ರಚನಾ ಸ್ಪರ್ಧೆಗಳಲ್ಲಿ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಡಾ. ಪೂಜಾರ ಬಹುಮಾನ ವಿತರಿಸಿದರು. ಕಾರ್ಯದರ್ಶಿ ವೆಂಕಟೇಶ ಪಾಟೀಲರು ಡಾ. ಪೂಜಾರ ಅವರನ್ನು ಸನ್ಮಾನಿಸಿದರು.

ವಿದ್ಯಾರ್ಥಿ ವೈಭವ ವಾಲಿ ಸ್ವಾಗತಿಸಿದರು. ನಾಗವೀರೇಂದ್ರ ಬಾಬು ವಂದಿಸಿದರು. ರಮ್ಯಾ ಗಿರಡ್ಡಿ ನಿರೂಪಿಸಿದರು. 

ಸುದ್ದಿ ಓದಿ