ಹುಕ್ಕೇರಿಯಲ್ಲಿ ಗೌರಿ ಆಗಮನ ಪ್ರತಿಷ್ಠಾಪನೆ
ಹುಕ್ಕೇರಿ : ಮಂಗಳವಾರ ಗಣೇಶನನ್ನು ಅದ್ಧೂರಿಯಾಗಿ ಸ್ವಾಗತಿಸಿದರೆ ಮಂಗಳವಾರದಂದು ಮಹಿಳೆಯರು ಭಕ್ತಿ, ಶೃದ್ಧೆಯಿಂದ ಪಟಾಕ್ಷಿಗಳ ಸುರಿಮಳೆ ಹಾಗೂ ವಾದ್ಯ ಮೇಳದೊಂದಿಗೆ ಗೌರಿಯನ್ನು ಬರಮಾಡಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದರು.
11 ಗಂಟೆ ನಂತರ ಮಹಿಳೆಯರು ತಮ್ಮ ತಮ್ಮ ಮನೆಗಳ ಸಮೀಪದ ಬಾವಿ, ಕೆರೆ ಹಾಗೂ ಕಾರಂಜಿಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರತಿಯೊಬ್ಭರು ತಾಮ್ರದ ಬಿಂದಿಗೆಯಲ್ಲಿ ಜೋಳದ ಎಲೆ, ಮೆಕ್ಕೆ ಜೋಳದ ತುರಾಯಿ, ಗೌರಿ ಹೂವಿನ ಟೊಂಗೆ, ಕಣಗಲಿ ಹೂವಿನ ಎಲೆಗಳನ್ನು ಹಾಕಿ ನೀರು ತುಂಬಿ ಗಂಗಾ ಹಾಗೂ ಗೌರಿಯನ್ನು ಪೂಜಿಸಿ ಒಬ್ಬರಿಗೊಬ್ಬರು ಅರಿಶಿನ ಕುಂಕುಮ ಹಚ್ಚಿ ಉಡಿ ತುಂಬಿಸಿಕೊಂಡರು. ನೆರೆದವರಿಗೆ ಪ್ರಸಾದ ಹಂಚಿ ಮಂಗಳಾರತಿ ಮಾಡಿದ ನಂತರ ಬಿಂದಿಗೆಯನ್ನು ತಲೆ ಮೇಲೆ ಹೊತ್ತುಕೊಂಡು ಮನೆಗೆ ತೆರಳಿ ಗಣೇಶನ ಬದಿಗೆ ಪ್ರತಿಷ್ಠಾಪಿಸಿ ಪೂಜಿಸಿದ ನಂತರ ರೊಟ್ಟಿ ಹಾಗೂ 5 ತರದ ಪಲ್ಯಗಳಿಂದ ತಯಾರಿಸಿದ ತರಕಾರಿಯ ನೈವದ್ಯ ಸಲ್ಲಿಸಿದರು. ಶುಕ್ರವಾರ ಗೌರಿಗೆ ಹೋಳಿಗೆ ನೈವದ್ಯ. ಶನಿವಾರದಂದು ರಾತ್ರಿ ಗಣೇಶನ ಜೊತೆಗೆ ಗೌರಿಯನ್ನು ವಿಸರ್ಜನೆ ಮಾಡಲಾಗುವದು