ಪ್ರಕಾಶ್ ಕೋಳಿವಾಡರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಮುಖಂಡರ ಒತ್ತಾಯ

ಪ್ರಕಾಶ್ ಕೋಳಿವಾಡರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಮುಖಂಡರ ಒತ್ತಾಯ    Congress leaders demand that Prakash Koliwada be given a ministerial position

ರಾಣೆಬೆನ್ನೂರು 01:  ಹಾವೇರಿ ಜಿಲ್ಲೆಯಲ್ಲಿ ಬಹು ಜನಸಂಖ್ಯೆ ಹೊಂದಿರುವ ವಾಣಿಜ್ಯ  ಕೇಂದ್ರ ಸ್ಥಾನವಾಗಿದ್ದು, ರಾಣೆಬೆನ್ನೂರು ನಗರ ಮತ್ತು ತಾಲೂಕಿನಲ್ಲಿ ಈಗಾಗಲೇ ಶೈಕ್ಷಣಿಕ ಕ್ರಾಂತಿ ನಡೆದಿದೆ.  ಯುವ  ಶಾಸಕ ಪ್ರಕಾಶ್ ಕೋಳಿವಾಡ ಅವರು ಶಿಕ್ಷಣ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಕೃಷಿ ಪೂರಕ, ರೈತ ಪರವಾಗಿ ಅಭಿವೃದ್ಧಿ ಕಾರ್ಯಗಳು ನಡೆಸುತ್ತಿರುವುದು  ಅವರ ದೂರ ದೃಷ್ಟಿಗೆ ಸಾಕ್ಷಿಯಾಗಿದೆ. ಅಂಥವರಿಂದ ಮತ್ತಷ್ಟು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣಬೇಕಾಗಿದೆ ಈ ನಿಟ್ಟಿನಲ್ಲಿ ಪ್ರಕಾಶ್ ಕೋಳಿವಾಡವರಿಗೆ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕೆಂದು  ಕಾಂಗ್ರೆಸ್ ನ ಹಿರಿಯ ಸದಸ್ಯ, ಶ್ರೀಮತಿ ರುಕ್ಮಿಣಿ ಸಾವುಕಾರ ಅವರು ಮನವಿ ಮಾಡಿದರು.

ಅವರು, ರವಿವಾರ ಓಂ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಮುಖಂಡರ, ಅಭಿಮಾನಿಗಳ ಪಕ್ಷದ ಕಾರ್ಯಕರ್ತರ ಸಭೆಯಲ್ಲ ತಮ್ಮ ಹಕ್ಕೋತ್ತಾಯ ಸಮಾಲೋಚನಾ ಸಭೆಯಲ್ಲಿ  ಮಾತನಾಡಿದರು. ರಾಹುಲ್ ಗಾಂಧಿಯವರು ದೇಶದ ಅಭಿವೃದ್ಧಿ ಯುವ ಜನತೆಯಿಂದ ಮಾತ್ರ ಸಾಧ್ಯವಿದೆ ಎನ್ನುವ ಧೋರಣೆ ಮತ್ತು  ದೂರದೃಷ್ಟಿ ಹೊಂದಿದ್ದಾರೆ. ಮತ್ತು ಈ ದೇಶದ ಅಭಿವೃದ್ಧಿ ಯುವ ಸಮುದಾಯದಿಂದ ಮಾತ್ರ ಸಾಧ್ಯವಿದೆ ಎನ್ನುವ ಮನೋಭಾವ ಅವರದಾಗಿದೆ.  ಅದೇ ಮನೋಭಾವ,ವೈಚಾರಿಕ ಚಿಂತನೆ  ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರದೂ ಆಗಿದೆ.

ಅವರು ಸಹ  ಯುವಕರಿಗೆ ಆದ್ಯತೆ ನೀಡಲು ಹೊರಟಿದ್ದಾರೆ . ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ  6 ಶಾಸಕರು ಈಗಾಗಲೇ ಇದ್ದು, ಅತಿ ಚಿಕ್ಕ ವಯಸ್ಸಿನ ಶಾಸಕರು ಪ್ರಕಾಶ ಕೋಳಿವಾಡ ಅವರಾಗಿದ್ದಾರೆ ಅವರಿಗೆ ಆದ್ಯತೆ ನೀಡಿದರೆ ಮತ್ತಷ್ಟು ಅಭಿವೃದ್ಧಿ ಜೊತೆಗೆ ಭವಿಷ್ಯದ ಚುನಾವಣೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಅಶೋಕಕುಮಾರ ಎಂ. ನಾಯ್ಕ್‌ ಅವರು ಮಾತನಾಡಿ, ವಿಧಾನಸಭಾ ಕ್ಷೇತ್ರ 94 ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ಯುವ ಶಾಸಕರು ಈಗಾಗಲೇ ನಗರವು ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರವೇಶಗಳಲ್ಲಿ  ಪ್ರಥಮ ಆದ್ಯತೆಯಾಗಿ ಶೈಕ್ಷಣಿಕ, ಕೃಷಿ ಕ್ಷೇತ್ರ ಮತ್ತು ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ.  

ನೂತನ ಮುಖ್ಯಮಂತ್ರಿಗಳು ಅಂತವರಿಗೆ ಸಚಿವ ಸ್ಥಾನ ನೀಡಿದರೇ ಉತ್ತರ ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆ ಮತ್ತು ಜಿಲ್ಲೆ ಹಾಗೂ ಮತಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದು ಎಂದರು. ಹರಿಹರದ ಎಸ್‌. ಜೆ ವಿ. ಪಿ. ಕಾಲೇಜು  ನಿವೃತ್ತ ಉಪನ್ಯಾಸಕ, ಬಿ.ಬಿ. ನಂದಾಲ ಅವರು ಮಾತನಾಡಿ ಯುವ ಶಾಸಕ ಪ್ರಕಾಶ್ ಕೋಳಿವಾಡ ಅವರು ಇಂದಿನ  ಆಧುನಿಕ ವಿಜ್ಞಾನದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರ ವಿಚಾರಧಾರೆಗಳು ಕ್ಷೇತ್ರದ ಅಭಿವೃದ್ಧಿಗೆ ಬಹು ಕಾರಣವಾಗುತ್ತದೆ.

ಯುವಕರಾಗಿರುವ ಶಾಸಕರು, ಡಿ.ಕೆ. ಶಿವಕುಮಾರ ಅವರ ಮಂತ್ರಿ ಮಂಡಲದಲ್ಲಿ ಕೋಳಿವಾಡ ಅವರಿಗೆ ಅವಕಾಶ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಪ್ರಮಾಣವಚನದ ನಂತರ ಮನವಿ ಸಲ್ಲಿಸಲು ಮುಂದಾಗುವುದಾಗಿ ಹೇಳಿದರು. ವೇದಿಕೆಯಲ್ಲಿ ಓಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಮನೋಜ ಸಾಹುಕಾರ, ಬೆಬಕ್ಕ ಮೆಣಸಿನಾಳ, ಅಜರೆಡ್ಡೇರ ಮುಂದಿನ ಮನಿ, ಇರ್ಫಾನ್ ಡಿಡಗೂರ, ಸೇರಿದಂತೆ ಕಾಂಗ್ರೆಸ್ನ ನೂರಾರು ಮುಖಂಡರು ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.