ವಚನ ಗಾಯನ ತರಬೇತಿ ಶಿಬಿರದ ಸಮಾರೋಪ
Conclusion of the Vachana singing training camp
ಧಾರವಾಡ 18: ಪ್ರತಿಯೊಂದು ವಚನಗಳು ವಿಶಿಷ್ಟವಾದ ಜೀವನದ ಮೌಲ್ಯಗಳನ್ನು ಹೊಂದಿವೆ. ಅವುಗಳನ್ನು ರಾಗಬದ್ಧವಾಗಿ ಹಾಡಿದಾಗ ಮಾತ್ರ ಅವು ಹೆಚ್ಚು ಪರಿಣಾಮಕಾರಿಯಾಗಿ ಎಲ್ಲರ ಮನಸ್ಸನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಧಾರವಾಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು. ನಗರದ ಸ್ವರಸೇನ ಪಂ. ಸಂಗಮೇಶ್ವರ ಗುರವ ಪ್ರತಿಷ್ಠಾನವು ದಿನಾಂಕ 15.05.2026 ರಂದು ಸಂಜೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಪಂ. ಸಂಗಮೇಶ್ವರ ಗುರವ ಅವರ 13ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಏರಿ್ಡಸಿದ್ದ ವಚನ ಗಾಯನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಲಿಂಗರಾಜ ಅಂಗಡಿ ಅವರು ಮಾತನಾಡುತ್ತ ಇಂತಹ ವಚನ ಗಾಯನ ಶಿಬಿರಗಳು ಹೆಚ್ಚೆಚ್ಚು ಜರುಗಬೇಕು ಎಂದರು. ಶಿಬಿರದ ಸಂಪನ್ಮೂಲ ಗುರುಗಳಾದ ಡಾ. ಸುಮಿತ್ರಾ ಕಾಡದೇವರಮಠ ಅವರು ಮಾತನಾಡುತ್ತ ಶಿಬಿರಾರ್ಥಿಗಳು ಬಹಳ ಆಸಕ್ತಿ, ಶ್ರದ್ಧೆಯಿಂದ ಶಿಬಿರದಲ್ಲಿ ಪಾಲ್ಗೊಂಡು, ತಾಳಬದ್ದ, ರಾಗಬದ್ಧ, ಶೃತಿಬದ್ದವಾಗಿ ವಚನಗಳನ್ನು ಅರ್ಥೈಸಿಕೊಂಡು ಹಾಡಲು ಕಲಿತಿರುವುದು ಪ್ರತಿಷ್ಠಾನದ ಉದ್ದೇಶ ಫಲಪ್ರದವಾಗಿದೆ. ಇಂಥಹ ವಚನ ಗಾಯನ ಶಿಬಿರಗಳಲ್ಲಿ ಉದಯೋನ್ಮುಖ ಕಲಾವಿದರು, ವಿದ್ಯಾರ್ಥಿಗಳು ಪಾಲ್ಗೊಂಡಾಗ ಮಾತ್ರ ವಚನ ಪರಂಪರೆ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದರು.
ಹಿರಿಯ ನ್ಯಾಯವಾದಿ, ಪ್ರತಿಷ್ಠಾನದ ಉಪಾಧ್ಯಕ್ಷ ಪಾಂಡುರಂಗ ನೀರಲಕೇರಿಯವರು ಮಾತನಾಡುತ್ತ 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದಾಗ ವಚನಗಳ ಭಂಡಾರ ರಕ್ಷಣೆಗೆ ನಿಂತವರು ಶರಣರು, ವಚನ ಸಾಹಿತ್ಯ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು ಅನೇಕ ಪ್ರದೇಶಗಳಿಗೆ ಹೊರಟರು. ಅದರಲ್ಲಿ ಧಾರವಾಡ, ಉಪ್ಪಿನ-ಬೆಟಗೇರಿ, ಉಳವಿಯ ಕಡೆಗೆ ಬಂದವರು ಶರಣ ಚನ್ನಬಸವಣ್ಣನವರು ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಶರಣ-ಶರಣೆಯರು. ಇಂತಹ ಪರಂಪರೆಯ ಮುಂದುವರಿಕೆಯಾಗಿ ನಮ್ಮ ಪ್ರತಿಷ್ಠಾನ 9 ದಿನಗಳ ವಚನ ಗಾಯನ ತರಬೇತಿ ಶಿಬಿರವನ್ನು ಆಯೋಜಿಸಿ, ಯಶಸ್ಸುಕಂಡಿದೆ ಎಂದರು. ಸಮಾರಂಭದ ಅಧ್ಯಕ್ಷತೆವಯಿಸಿದ್ದ ಶಶಿಧರ ಸಾಲಿ ಅವರು ಮಾತನಾಡುತ್ತ 12ನೇ ಶತಮಾನದ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರೆ ಅದಕ್ಕೆ ಅದರ ಗಟ್ಟಿತನವೇ ಪ್ರಾಮುಖ್ಯವಾಗಿವೆ. ಸಾಂಸ್ಕೃತಿಕ ಪರಂಪರೆಯು ಅನೇಕ ವರ್ಷಗಳಿಂದ ಧಾರವಾಡಕ್ಕೆ ಹರಿದು ಬಂದಿದೆ. ಪಂ.ಪಂಚಾಕ್ಷರಿ ಗವಾಯಿಗಳು, ಪಂ.ಮಲ್ಲಿಕಾರ್ಜುನ ಮನವಸೂರ, ಪಂ.ಬಸವರಾಜ ರಾಜಗುರು, ಪಂ.ಸಂಗಮೇಶ್ವರ ಗುರವ ಅವರು ವಚನ ಗಾಯನ ಪರಂಪರೆಗೆ ನಾಂದಿ ಹಾಡುವುದರ ಮೂಲಕ ವಚನ ಗಾಯನಕ್ಕೆ ಪ್ರಸಿದ್ಧಿ ತಂದುಕೊಟ್ಟರು ಎಂದರು.
ಇದೇ ಸಂದರ್ಭದಲ್ಲಿ ಶಿಬಿರದ ಸಂಪನ್ಮೂಲ ಗುರುಗಳಾದ ಡಾ. ಸುಮಿತ್ರಾ ಕಾಡದೇವರಮಠ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಸುಧಾ ಹುಲಗೂರ ಅವರು ಶಿಬಿರದ ಮೇಲೆ ಕವನ ರಚನೆ ಮಾಡಿ ಗಾಯನದ ಮೂಲಕ ಪ್ರಸ್ತುತ ಪಡಿಸಿದರು. ಶಿಬಿರಾರ್ಥಿ ನಾಗರತ್ನಾ ಕುಂಬಾರ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರತಿಷ್ಠಾನದ ಉಪಾಧ್ಯಕ್ಷ ಪಂ.ಕೈವಲ್ಯಕುಮಾರ ಗುರವ, ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ಮೃತ್ಯುಂಜಯ ಶೆಟ್ಟರ, ಪಂ.ರಘುನಾಥ ನಾಕೋಡ, ಪಂ.ನಂದಿಕೇಶ್ವರ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಜ್ಯೋತಿಲಕ್ಷ್ಮೀ ಡಿ.ಪಿ., ಡಾ.ಶಿವಲೀಲಾ ವೈಜನಾಥ, ಹಫೀಜ್ ಬಾಲೇಖಾನ್, ವಿದುಷಿ ಸುಜಾತಾ ಗುರವ ಶಿಬಿರ ಸಂಪನ್ಮೂಲ ಗುರುಗಳಾಗಿ ಪಾಲ್ಗೊಂಡಿದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಶಿಬಿರಾರ್ಥಿಗಳು ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ವಿದುಷಿ ಸುಜಾತಾ ಗುರವ ವಂದಿಸಿದರು. ಸುನಿತಾ ಮೂರ್ಶಿಳ್ಳಿ, ಸುಜಾತಾ ಹಡಗಲಿ, ರಾಧಾ ದೇಸಾಯಿ, ಗೋಹರಜಾನ ನದಾಫ್, ಮೇಧಾ ಘಳಗಿ ರಾಜಶೇಖರ ಮಸೋಳಿ ಮುಂತಾದವರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 