ಭಾರತ್ ಬಂದ್ಗೆ ರಾಣೇಬೆನ್ನೂರಲ್ಲಿ ಸಂಪೂರ್ಣ ವಿಫಲ
ಲೋಕದರ್ಶನವರದಿ
ರಾಣಿಬೆನ್ನೂರ: ಕೇಂದ್ರ ಸಕರ್ಾರದ ಕಾಮರ್ಿಕರ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ್ ಬಂದ್ ರಾಣೇಬೆನ್ನೂರಿನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಕೆಲ ಸಂಘಟನೆಗಳು ನೆಪ ಮಾತ್ರಕ್ಕೆ ತಹಶೀಲ್ದಾರರಿಗೆ ಮನವಿ ಪತ್ರ ಅಪರ್ಿಸಿದ್ದನ್ನು ಹೊರತು ಪಡಿಸಿದರೆ ಬಂದ್ಗೆ ಬೆಂಬಲ ದೊರೆಯಲಿಲ್ಲ. ಸಾರಿಗೆ ಬಸ್ಗಳು ಸೇರಿದಂತೆ ಆಟೋ ಮತ್ತು ಲಾರಿ, ಖಾಸಗಿ ವಾಹನಗಳು ಮತ್ತಿತರ ವಾಹನಗಳು ಎಂದಿನಂತೆ ಸಂಚರಿಸಿದವು. ಶಾಲಾ-ಕಾಲೇಜುಗಳು ಎಂದಿನಂತೆ ತರಗತಿ ಆರಂಭಿಸಿದವು. ಚಲಚಿತ್ರ ಮಂದಿರಗಳು, ಕೆಲವು ಬ್ಯಾಂಕ್ಗಳು ಬಂದ್ನಿಂದ ದೂರ ಉಳಿದಿದ್ದು ಕಂಡು ಬಂದಿತು.
ಜನನಿಬೀಡ ಪ್ರದೇಶಗಳಾದ ಪಿಬಿ ರಸ್ತೆ ಎಂಜಿ ರಸ್ತೆ, ಬಿಎಸ್ ರೋಡ್, ಹಲಗೇರಿ ರಸ್ತೆ, ಮೇಡ್ಲೇರಿ ರಸ್ತೆ, ದೇವರಗುಡ್ಡ ರೋಡ್ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಎಂದಿನಂತೆ ಇಂದು ಸಹ ಹೆಚ್ಚಾಗಿ ಜನರು ಮತ್ತು ವಾಹನಗಳು ಸಂಚರಿಸಿದ್ದು ಕಂಡು ಬಂದಿತು. ಹೊಟೇಲ್ಗಳು, ಕಿರಾಣಿ ಅಂಗಡಿಗಳು, ಜನರಲ್ ಸ್ಟೋರ್, ಆಸ್ಪತ್ರೆ, ಔಷಧಿ ಅಂಗಡಿಗಳು, ಮದ್ಯದ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಬಸ್ ನಿಲ್ದಾಣದಲ್ಲಿ ಜನ ಜಂಗುಳಿ ಅಧಿಕವಾಗಿತ್ತು. ಒಟ್ಟಾರೆ ಭಾರತ್ ಬಂದ್ಗೆ ರಾಣೇಬೆನ್ನೂರಿನಲ್ಲಿ ಯಾವುದೇ ಪರಿಣಾಮ ಬೀರದಿರುವುದು ಕಂಡು ಬಂದಿತು.
ಜಿಲ್ಲೆಯಾದ್ಯಂತ ಗಣತಿ ಕಾರ್ಯ ಸಂಪೂರ್ಣವಾಗಿ ಯಶಸ್ವಿಗೊಳಿಸಿ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 