ಶೀಘ್ರ ರಾಜ್ಯಗಳಲ್ಲಿ ವಾಣಿಜ್ಯ ಚಟುವಟಿಕೆ ಸಹಜ ಸ್ಥಿತಿಗೆ : ಟ್ರಂಪ್ ಆಶಯ
ವಾಷಿಂಗ್ಟನ್, ಎಪ್ರಿಲ್ 15, ಕರೋನ ಸೊಂಕಿನ ಕಾರಣದಿಂದ ಸ್ಥಗಿತವಾಗಿರುವ ಅಮೆರಿಕದ ಕೆಲವು ರಾಜ್ಯಗಳಲ್ಲಿ ಮೇ 1 ರ ಮೊದಲು ಪರಿಸ್ಥಿತಿ ಸಧಾರಿಸಿ , ವಾಣಿಜ್ಯ ಚಟುವಟಿಕೆ ಸಹಜ ಸ್ಥತಿಗೆ ಮರಳಲಿದೆ ಎಂಬ ಆಶಯವನ್ನು ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ. "ಇದು ಬಹಳ ಹತ್ತಿರದಲ್ಲಿದೆ, ಬಹುಶಃ ಮೇ 1 ರ ದಿನಾಂಕಕ್ಕಿಂತ ಮುಂಚೆಯೇ, ಅದು ಕೆಲವು ರಾಜ್ಯಗಳಲ್ಲಿ ಜನಜೀವನ ಮೊದಲಿನಂತೆ ಚಲಿಸಲಿದೆ ದೇಶದ ಆರ್ಥಿಕ ಚಟುವಟಿಕೆ ಮತ್ತೆ ಪುನರಾರಂಭಗೊಳ್ಳುವ ಯೋಜನೆಗಳ ಬಗ್ಗೆ ಟ್ರಂಪ್ ಮುನ್ಸೂಚನೆ ನೀಡಿದರು. ದೇಶದ ಆರ್ಥಿಕತೆಯನ್ನು ಪುನಃ ತೆರೆಯುವ ಯೋಜನೆಗಳನ್ನು ಅಂತಿಮಗೊಳಿಸಲು ಟ್ರಂಪ್ ಆಡಳಿತ ಈ ವಾರದಲ್ಲಿ ಎಲ್ಲಾ ಗೌರ್ನರ್ ಜೊತೆ ವಿವರಗಳನ್ನು ಚರ್ಚಿಸಲಿದೆ ಎಂದೂ ಅಧ್ಯಕ್ಷರು ಹೇಳಿದರು. ಪ್ರತಿ ರಾಜ್ಯದ ಗೌರ್ನರ್ ಗಳು ಸೂಕ್ತವಾದಾಗ ತಮ್ಮ ರಾಜ್ಯಗಳಲ್ಲಿ ವಾಣಿಜ್ಯ ಚಟುವಟಿಕೆ ತೆರೆಯುವ ಯೋಜನೆಯನ್ನು ಜಾರಿಗೆ ತರಲು ಅಧಿಕಾರ ನೀಡಲಾಗುವುದು ಎಂದು ಟ್ರಂಪ್ ಹೇಳಿದರು.ಈ ನಡುವೆ ಮಂಗಳವಾರದ ವೇಳೆಗೆ ದೇಶದಲ್ಲಿ 598,000 ಕ್ಕೂ ಹೆಚ್ಚು ಕರೋನ ಪ್ರಕರಣಗಳನ್ನು ದೃಡಪಟ್ಟಿದ್ದು, 25,ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 