ಮುಧೋಳ

ಸಹಕಾರಿ ಸಂಘಗಳು ರೈತರಿಗೆ ಸಹಕಾರಿಯಾಗಿವೆ : ಎಸ್‌ಆರ್‌.ಪಾಟೀಲ ಹೇಳಿಕೆ: ಸೋರಗಾಂವ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ

ಸಹಕಾರಿ ಸಂಘಗಳು ರೈತರಿಗೆ ಸಹಕಾರಿಯಾಗಿವೆ : ಎಸ್‌ಆರ್‌.ಪಾಟೀಲ ಹೇಳಿಕೆ: ಸೋರಗಾಂವ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ

ಲೋಕದರ್ಶನ ವರದಿ 

ಮುಧೋಳ 22: ಸಹಕಾರಿ ಸಂಘಗಳು ರೈತರಿಗೆ ಸಹಕಾರಿಯಾಗಿವೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಡಿಸಿಸಿ ಬ್ಯಾಂಕ್ ಕಡಿಮೆ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.  

ಗುರುವಾರ ತಾಲೂಕಿನ ಸೋರಗಾಂವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.  

       ಸಹಕಾರಿ ತತ್ವದಲ್ಲಿಯೇ ಸೊಸೈಟಿಗಳ ಮೂಲಕ ಡಿಸಿಸಿ ಬ್ಯಾಂಕ್, ಅಭಿವೃದ್ಧಿಯಲ್ಲಿ ಮುನ್ನಡೆದಿದೆ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದ ವ ಅವಧಿಯಲ್ಲಿ ಜಿಲ್ಲೆಯಲ್ಲಿ ಅಂದಾಜು 1500 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿರುವುದು ಕೊಡುಗೆಯಾಗಿದೆ ಎಂದರು.  

ಬಿಡಿಸಿಸಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಗ್ರಾಮೀಣ ಭಾಗದ ದೊಡ್ಡ ರೈತರ ಹಿತವನ್ನು ಇಟ್ಟುಕೊಂಡು ಪಿಕೆಪಿಎಸ್ ಸ್ಥಾಪನೆಯಾಗಿವೆ. ಜಿಲ್ಲೆಯ 220 ಸೊಸೈಟಿಗಳಿಗೆ 300 ಕೋಟಿರೂ. ಸಾಲ ನೀಡಲಾಗಿದೆ. 2822 ರೂ. ಠೇವಣಿ ಬ್ಯಾಂಕ್ ನಿರ್ದೇಶಕ ನಂದುಗೌಡ ಪಾಟೀಲ ನೇತೃತ್ವದ ಸಹಕಾರಿ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.  

    ನಿರ್ದೇಶಕ ಡಿಸಿಸಿ ಬ್ಯಾಂಕ್ ಸೊಸೈಟಿ ಅಧ್ಯಕ್ಷ ನಂದಕುಮಾರ ಪಾಟೀಲ  ಮಾತನಾಡಿ ನಮ್ಮ ತಂದೆಯವರ ಕನಸಿನ ಸಂಸ್ಥೆ 2000ರಲ್ಲಿ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಗ್ರಾಮದ ರೈತರ ಶ್ರಮ ಹಾಗೂ ಸಹಕಾರ ಕಾರಣ ಎಂದರು. 

ರಡ್ಡಿಗುರು ಪೀಠದ ವೇಮಾನಂದ ಶ್ರೀಗಳು ಆಶೀರ್ವಾದ ನೀಡಿದರು. ಶಿಕ್ಷಣ ಹಾಗೂ ಕ್ರೀಡಾ ಸಾಧಕರಿಗೆ, ಸೊಸೈಟಿಯ ಹಾಲಿ, ಮಾಜಿ ನಿರ್ದೇಶಕರಿಗೆ ಸಿಬ್ಬಂದಿಗೆ ಪೂಜ್ಯರು, ಗಣ್ಯರು ಸನ್ಮಾನಿಸಿದರು.  

     ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಯಡಿಯೂರ​‍್ಪ ಸರಕಾರವಿದ್ದಾಗ ಶೂನ್ಯ ಬಡ್ಡಿದರದಲ್ಲಿ ವಿತರಣೆ ಸಾಲ ರೈತರಿಗೆ ಆರಂಭಿಸಲಾಯಿತು ಎಂದರು.         

         ಮರೆಗುದ್ದಿಯ ಗುರುಪಾದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಕುಮಾರ ಜನಾಲಿ, ತಮ್ಮನಪ್ಪ ಹಲಗಲಿ, ಸುಭಾಸ ಅಡವಿ, ಶಂಕ್ರ​‍್ಪ ಹುದ್ದಾರ, ಹಣಮಂತ ಅಡವಿ, ಎಸ್‌.ಆರ್‌.ಬಾಡಗಿ, ಮಂಡಲಿಕ ಹಗಳಗಾರ, ಸುನೀಲ ಬಾಬು ಪೂಜಾರಿ, ಪಾಟೀಲ, ಮಂಡಲಿಕ ಯಳ್ಳೂರು, ಲೋಕಾಪೂರ, ಕಲ್ಲಪ್ಪ ಹುದ್ದಾರ, ಸುರೇಶ ಶ್ರೀಕಾಂತ ಮೇತ್ರಿ, ಅಕ್ಕವ್ವಾ ಪಾಟೀಲ, ಸತ್ಯವ್ವಾ ಬರಗಿ, ಗ್ರಾಪಂಅಧ್ಯಕ್ಷೆ ಪ್ರಭಾವತಿಟರ್ಕಿ, ಪಿಡಿಓ ರೋಹಿತ ಇಟಕನವರ, ಸಿಇಒ ಚಂದ್ರಶೇಖರ ಪೂಜಾರಿ, ನಿಂಗಪ್ಪ ಗುಡಿ ಇತರರು ಇದ್ದರು.  


ಕೋಟ್ 


ಉತ್ತರಕ ರ್ನಾಟಕದಲ್ಲಿ ಸಂಸ್ಕಾರ, ಸಂಪ್ರದಾಯ, ಭಾವನಾತ್ಮಕ ಸಂಬಂಧಗಳಿಗೆ ಬೆಲೆಯಿದೆ. ಸಹಕಾರಿ ಕ್ಷೇತ್ರದ ಮೂಲಕ ಸಮುದಾಯದ ಅಭಿವೃದ್ಧಿಯಾಗುತ್ತಿದೆ. ಸಹಕಾರಿ ಕ್ಷೇತ್ರದ ಸಾಧನೆ ಎಲ್ಲರಿಗೂ ಉಪಯುಕ್ತವಾಗಿದೆ. 


 ಶ್ರೀವೇಮಾನಂದ ಮಹಾಸ್ವಾಮಿಗಳು   

 ಎರೆಹೊಸಳ್ಳಿ 


ಸುದ್ದಿ ಓದಿ