ಕೆಎಲ್‌ಇ ಸಂಗೀತ ಶಾಲೆಯಿಂದ ಮಕ್ಕಳಿಗೆ ‘ಬೇಸಿಗೆ ಸಂಗೀತ ಶಿಬಿರ’ ಮುಕ್ತಾಯ ಸಮಾರಂಭ

ಕೆಎಲ್‌ಇ ಸಂಗೀತ ಶಾಲೆಯಿಂದ ಮಕ್ಕಳಿಗೆ ‘ಬೇಸಿಗೆ ಸಂಗೀತ ಶಿಬಿರ’ ಮುಕ್ತಾಯ ಸಮಾರಂಭ Closing ceremony of ‘Summer Music Camp’ for children by KLE Music School

ಬೆಳಗಾವಿ 23: ಸಂಗೀತ ಮನಸ್ಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿತುಂಬುತ್ತದೆ. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅದನ್ನು ಮಕ್ಕಳಿಗೆ ಉಣಬಡಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಕಾಹೆರ್ ಉಪಕುಲಪತಿ  ಪ್ರೊ ಡಾ. ಸಂದೀಪ್ ಶ್ರೀವಾತ್ಸವ ಹೇಳಿದರು. ಅವರು ಜೆಎನ್‌ಎಂಸಿ ಕನ್ವೇಷನ್ ಸೆಂಟರ್ ಡಾ.ಎಚ್‌.ಬಿ.ರಾಜಶೇಖರ ಸಭಾಂಗಣದಲ್ಲಿ ಆಯೋಜಿಸಿದ್ದ  ಕಾಹೆರ್ ವಿವಿಯದ ಸಂಗೀತ ಶಾಲೆಯು ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. ಹಾಗೂ ಕೆಎಲ್‌ಈ ವಿಶ್ವವಿದ್ಯಾಲಯದ  ಕುಲ ಸಚಿವರಾದ ಡಾ ವಿ ಎನ್ ಪಟ್ಟಣಶೆಟ್ಟಿಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದ ಲಲಿತ ಕಲೆಗಳ ಅಭಿರುಚಿಯನ್ನು ಮೂಡಿಸುವುದು ಅಗತ್ಯವಾಗಿದೆ.  

ಸೂಷ್ಮವಾದ  ಮನಸ್ಸು ಅವುಗಳನ್ನು ಬಹುಬೇಗನೆ ಪಡೆಯುವುದು. ಸಂಗೀತ ಸಂಸ್ಕಾರ ದಿಂದ ಅವರ ಬದುಕು ಕೂಡ ಸುಂದರಗೊಳ್ಳುವುದು. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರಗಳನ್ನು ಆಯೋಜಿಸಿ ಉತ್ತೇಜಿಸುತ್ತಿದೆ ಎಂದು ಹೇಳಿದರು. ಕಣ್ಮನ ಸೆಳೆದ ಸಂಗೀತ: ಈ ಸಂಗೀತ ಶಿಬಿರವನ್ನು 4 ನೆ ಮೇ ರಿಂದ 22 ಮೇ ವರೆಗೆ ಆಯೋಜಿಸಲಾಗಿತ್ತು. 106 ಪುಟ್ಟಮಕ್ಕಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಶಾಸಿೊಯ ಗಾಯನ ಹಾಗೂ ಬಾಲ ಗೀತೆಗಳು, ಭರತನಾಟ್ಯ, ಹಾರ್ಮೋನಿಯಂ ವಾದ್ಯ, ತಬಲಾ ವಾದ್ಯ ಸಂಗೀತಗಳ ತರಬೇತಿಯನ್ನು ಪುಟ್ಟ ಮಕ್ಕಳಿಗೆ ನೀಡಲಾಯಿತು. ಅತ್ಯಂತ ಸುಶ್ರಾವ್ಯವಾಗಿ ಮಕ್ಕಳು ಸಂಗೀತವನ್ನು ಹಾಡುವಮೂಲಕ, ಹಾಗೂ ವಾದ್ಯಗಳನ್ನು ನುಡಿಸುವ ಮೂಲಕ ಸಭಾಂಗಣವನ್ನು ಮಧುರಗೊಳಿಸಿದರು, ನಾಟ್ಯಮಯೂರರಾಗಿ ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿದರು, ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗ ಗೀತೆಗಳನ್ನು, ಭಕ್ತಿಗೀತೆಗಳನ್ನು ಹಾಡುಗಳನ್ನು ನುಡಿಸಿ ಪ್ರೇಕ್ಷಕರ ಹೃದಯಸೂರೆಗೊಳಿಸಿದರು.  

ಸಂಗೀತ ಶಾಲೆಯು ಮಕ್ಕಳ ಹೃದಯದಲ್ಲಿ ನಾದಲೋಕದ ಕಲಾಬೀಜವನ್ನು ಬಿತ್ತಿ, ಸಸಿಯಾಗಿ ರೂಪಿಸಿದ್ದು ಸಾರ್ಥಕವಾಗಿತ್ತು. ಮಕ್ಕಳ ಸೂಪ್ತ ಪ್ರತಿಭೆಗೆ ಕೆಎಲ್‌ಇ ಸಂಗೀತಶಾಲೆ ವಿಶೇಷವಾದ ವೇದಿಕೆಯನ್ನು ಕಲ್ಪಿಸಿ ಅನಾವರಣಗೊಳಿಸಿದ್ದು ಅಸಂಖ್ಯ ಪಾಲಕರ ಹೃದಯವನ್ನು ಗೆದ್ದಿತ್ತು. ಪಾಲಕರು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡು ಕೆಎಲ್‌ಇ ಸಂಗೀತ ಶಾಲೆಯ ಶ್ರಮದ ಸಾರ್ಥಕತೆಯನ್ನು ಕೊಂಡಾಡಿದರು.ಈ ಸಂದರ್ಭದಲ್ಲಿ ಸಂಗೀತ ಶಾಲೆಯ ಸಂಯೋಜಕರಾದ ಡಾ.ರಾಜೇಂದ್ರ ಭಂಡಾನಕರ,  ಸಂಗೀತ ಶಾಲೆ ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬರಡಿಕರ ಸಂಗೀತ  ಪ್ರೊಫೆಸರ್ ಆದಂತಹ ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸಂಗೀತ ಶಿಕ್ಷಕಿ ಸಂಗೀತಾ ಕುಲಕರ್ಣಿ,, ಶ್ರೀ ವಿಲಾಸ ಭೋಸ್ಲೆ ಹಾರ್ಮೋನಿಯಂ ಶಿಕ್ಷಕರಿದ್ದರು.