ಆರೋಗ್ಯ ರಕ್ಷಾ ಸಮಿತಿ ಪದಾಧಿಕಾರಿಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ
ಲೋಕದರ್ಶನ ವರದಿ
ಕುಷ್ಟಗಿ 20: ಆರೋಗ್ಯ ರಕ್ಷಾ ಸಮಿತಿ ಪದಾಧಿಕಾರಿಗಳು ಬುಧವಾರ ಬೆಳಿಗ್ಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮಾಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಪ್ರಥಮವಾಗಿ ಆಸ್ಪತ್ರೆ ಸುತ್ತ ಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಕಾರ್ಯಗೊಂಡರು.
ಈ ಸಂದರ್ಭದಲ್ಲಿ ಸುರೇಶ ಸೇಬಿನಕಟ್ಟಿ, ಸುಮಾ ವಿರೇಶ ಹಿರೇಮಠ, ವಿರೇಶ ಮಂಟಗೇರಿ, ಮಾರುತಿ ಗೂಳಿ, ಸಂಗಪ್ಪ ಬಳೊಡಿ, ರಮೇಶ ಬಡಗೇರ, ರಮೇಶ ಕೊಳ್ಳಿ, ರಾಜಾಸಾಬ ಕಿಡದೂರ, ಡಾ.ಕೆ.ಎಸ್ ರಡ್ಡಿ, ಡಾ.ಚಂದ್ರಶೇಖರ ಮಂತ್ರಿ ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು